ಸಿರಿಯಾ ಮೇಲಿನ ದಾಳಿಗೂ ಮುನ್ನ ರಷ್ಯಾಗೆ ಮಾಹಿತಿ ನೀಡಲಾಗಿತ್ತು: ಪೆಂಟಗನ್

ಸಿರಿಯಾದ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸುವುದಕ್ಕೂ ಮುನ್ನ ರಷ್ಯಾಗೆ ಮಾಹಿತಿ ನೀಡಲಾಗಿತ್ತು ಎಂದು ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ.
ಪೆಂಟಗನ್
ಪೆಂಟಗನ್
ವಾಷಿಂಗ್ ಟನ್: ಸಿರಿಯಾದ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸುವುದಕ್ಕೂ ಮುನ್ನ ರಷ್ಯಾಗೆ ಮಾಹಿತಿ ನೀಡಲಾಗಿತ್ತು ಎಂದು ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ. 
ಕ್ಷಿಪಣಿ ದಾಳಿ ನಡೆಯುವುದಕ್ಕೂ ಮುನ್ನವೇ ರಷ್ಯಾಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಪೆಂಟಗನ್ ನ ವಕ್ತಾರ ಜೆಫ್ ಡೇವಿಸ್ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿದ್ದು, ದಾಳಿ ಮಾಡುವುದಕ್ಕೂ ಮುನ್ನ ಸೇನಾ ನೆಲೆಯಲ್ಲಿರುವ ರಷ್ಯಾ ಹಾಗೂ ಸಿರಿಯಾದ ಸಿಬ್ಬಂದಿಗಳಿಗೆ ಉಂಟಾಗಬಹುದಾದ ಹಾನಿಯನ್ನು ತಪ್ಪಿಸಲು ಅಮೆರಿಕಾ ಮಿಲಿಟರಿ ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿತ್ತು ಎಂದಿದ್ದಾರೆ. 
ಇದೇ ವೇಳೆ ಅಮೆರಿಕಾದ ಕಾರ್ಯದರ್ಶಿ (ಸಚಿವ) ರೆಕ್ಸ್ ಟಿಲ್ಲರ್ ಸನ್ ರಷ್ಯಾ ವಿರುದ್ಧ ಆರೋಪ ಮಾಡಿದ್ದು, ಸಿರಿಯಾದಲ್ಲಿ ರಾಸಾಯನಿಕ ದಾಳಿಯನ್ನು ತಡೆಗಟ್ಟುವಲ್ಲಿ ರಷ್ಯಾ ವಿಫಲವಾಗಿದೆ. ಸಿರಿಯಾದಲ್ಲಿ ನಡೆದ ರಾಸಾಯನಿಕ ದಾಳಿಗೆ ಪ್ರತಿಯಾಗಿ ಅಮೆರಿಕಾ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದಾರೆ. 
ಸಿರಿಯಾದಲ್ಲಿರುವ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶ ಮಾಡುವುದರಲ್ಲಿ ರಷ್ಯಾ ವಿಫಲವಾಗಿದೆ ಎಂದು ರೆಕ್ಸ್ ಟಿಲ್ಲರ್ ಸನ್ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com