ವಂದೇ ಮಾತರಂ ಹಾಡದವರು ಸಂಕುಚಿತ ಮನಸ್ಥಿತಿಯುಳ್ಳವರು: ಯೋಗಿ ಆದಿತ್ಯನಾಥ್

ವಂದೇ ಮಾತರಂ ರಾಷ್ಟ್ರೀಯ ಗೀತೆ ಹಾಡಲು ನಿಕಾರಿಸಿವದವರ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಿಡಿಕಾರಿದ್ದಾರೆ...
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Updated on: 
ಲಖನೌ: ವಂದೇ ಮಾತರಂ ರಾಷ್ಟ್ರೀಯ ಗೀತೆ ಹಾಡಲು ನಿಕಾರಿಸಿವದವರ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಿಡಿಕಾರಿದ್ದಾರೆ. 
ಈ ಕುರಿತಂತೆ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ವಂದೇ ಮಾತರಂ ರಾಷ್ಟ್ರೀಯ ಗೀತೆಯನ್ನು ದೇಶದ ಪ್ರತಿಯೊಬ್ಬ ನಾಗರೀಕರು ಹಾಡಲೇಬೇಕು. ವಂದೇ ಮಾತರಂ ಹಾಡಲು ನಿರಾಕರಿಸುವುದು ಗಂಭೀರ ವಿಚಾರವಾಗಿದ್ದು. ವಂದೇ ಮಾತರಂ ಹಾಡಲು ನಿಕಾರಿಸುವವರರು ಸಂಕುಚಿತ ಮನಸ್ಥಿತಿಯುಳ್ಳವರಾಗಿದ್ದಾರೆಂದು ಹೇಳಿದ್ದಾರೆ. 
ಕೆಲವು ಜನರು ವಂದೇ ಮಾತಂರ ಗೀತೆ ಹಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ದೇಶ 21ನೇ ಶತಮಾನದತ್ತ ಸಾಗಬೇಕೆಂದು ನಾವು ಬಯಸುತ್ತಿದ್ದೇವೆ. ವಿಚಾರ ವಂದೇ ಮಾತರಂ ಗೀತೆ ಹಾಡಬೇಕೆ...ಇಲ್ಲವೇ ಎಂಬುದರ ಕುರಿತಾಗಿ ಅಲ್ಲ. ಇದೊಂದು ದೇಶದ ಕಾಳಜಿ ವಿಚಾರವಾಗಿದೆ. ಸಣ್ಣ ಮನಸ್ಥಿತಿಯಿಂದ ನಾವು ಹೊರಬೇಕಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com