ಇವಿಎಂ ಬದಲು ಮತಪತ್ರ ಬಳಸುವಂತೆ ಚುನಾವಣಾ ಆಯೋಗಕ್ಕೆ 16 ರಾಜಕೀಯ ಪಕ್ಷಗಳ ಆಗ್ರಹ

ಇವಿಎಂ ವಿಶ್ವಾಸ ಕಳೆದುಕೊಂಡಿದ್ದರಿಂದ ಮತ್ತೆ ಮತಪತ್ರ ಪದ್ದತಿಗೆ ಮರಳುವಂತೆ 16 ಪ್ರತಿಪಕ್ಷಗಳು ಸೋಮವಾರ ಚುನಾವಣಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಇವಿಎಂ ವಿಶ್ವಾಸ ಕಳೆದುಕೊಂಡಿದ್ದರಿಂದ ಮತ್ತೆ ಮತಪತ್ರ ಪದ್ದತಿಗೆ ಮರಳುವಂತೆ 16 ಪ್ರತಿಪಕ್ಷಗಳು ಸೋಮವಾರ ಚುನಾವಣಾ ಆಯೋಗಕ್ಕೆ ಒತ್ತಾಯಿಸಿವೆ.
ಕಾಂಗ್ರೆಸ್, ಬಿಎಸ್ಪಿ, ಡಿಎಂಕೆ, ತೃಣಮೂಲ ಕಾಂಗ್ರೆಸ್ ಹಾಗೂ ಎಡರಂಗೆ ಸೇರಿದಂತೆ 16 ರಾಜಕೀಯ ಪಕ್ಷಗಳ ಮುಖಂಡರು ಇಂದು ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ, ಮುಂಬರುವ ಚುನಾವಣೆಗಳಲ್ಲಿ ಮತಪತ್ರ ಬಳಸುವಂತೆ ಆಗ್ರಹಿಸಿವೆ.
ಚುನಾವಣಾ ಅಧಿಕಾರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಶಿಬಲ್ ಹಾಗೂ ಡಿಎಂಕೆ ನಾಯಕ ಟಿ ಶಿವ ಅವರು, ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಚರ್ಚಿಸಲು ಶೀಘ್ರ ಸರ್ವಪಕ್ಷಗಳ ಸಭೆ ಕರೆಯುವುದಾಗಿ ತಿಳಿಸಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com