ರಾಮಮಂದಿರಕ್ಕೆ ಅಡ್ಡಿಪಡಿಸುವವರ ತಲೆ ಕಡಿಯುತ್ತೇನೆ: ಬಿಜೆಪಿ ಶಾಸಕ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂಬ ಉಮಾ ಭಾರತಿಯವರ ಹೇಳಇಕೆ ಬೆನ್ನಲ್ಲೇ, ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸುವವರ ರುಂಡಗಳನ್ನು ಚಂಡಾಡುತ್ತೇವೆಂಬ ಹೇಳಿಕೆಯನ್ನು ಬಿಜೆಪಿ...
ಹೈದರಾಬಾದ್ ಬಿಜೆಪಿ ಶಾಸಕ ರಾಜಾ ಸಿಂಗ್
ಹೈದರಾಬಾದ್ ಬಿಜೆಪಿ ಶಾಸಕ ರಾಜಾ ಸಿಂಗ್
Updated on
ಹೈದರಾಬಾದ್; ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂಬ ಉಮಾ ಭಾರತಿಯವರ ಹೇಳಇಕೆ ಬೆನ್ನಲ್ಲೇ, ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸುವವರ ರುಂಡಗಳನ್ನು ಚಂಡಾಡುತ್ತೇವೆಂಬ ಹೇಳಿಕೆಯನ್ನು ಬಿಜೆಪಿ ಶಾಸಕರೊಬ್ಬರು ನೀಡಿದ್ದಾರೆ. 
ತೆಲಂಗಾಣದ ರಾಜ್ಯದ ಹೈದರಾಬಾದ್ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಈ ಹೇಳಿಕೆಯನ್ನು ನೀಡಿದ್ದಾರ ರಾಮ ಮಂದಿರ ಕಟ್ಟಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅಂಥಹವರ ತಲೆಗಳನ್ನು ನಾವು ಕಡಿಯುತ್ತೇವೆಂದು ಹೇಳಲು ನಾನು ಇಚ್ಛಿಸುತ್ತೇನೆಂದು ಹೇಳಿದ್ದಾರೆ. 
ನಂತರ ತಮ್ಮ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿದ ಅವರು, ಅಯೋಧ್ಯೆ ರಾಮ ಮಂದಿನ ನಿರ್ಮಾಣಕ್ಕಾಗಿ ನನ್ನ ಪ್ರಾಣವನ್ನು ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ. ಹಾಗೂ ಅಡ್ಡಿಸುವವರ ಹತ್ಯೆ ಮಾಡಲು ಸಿದ್ಧನಿದ್ದೇನೆಂದು ಹೇಳಿದರು. 
ರಾಜಾ ಸಿಂಗ್ ಅವರ ಈ ಹೇಳಿಕೆಗೆ ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಶಾಸಕನ ವಿರುದ್ಧ ದೂರು ದಾಖಲಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com