ಹೈಜಾಕ್ ಬೆದರಿಕೆ: ಮುಂಬೈ, ಚೆನ್ನೈ, ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಬಿಗಿ ಭದ್ರತೆ

ವಿಮಾನ ಹೈಜಾಕ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ:  ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ನಿಂದ ಹೊರಡುವ ವಿಮಾನಗಳಲ್ಲಿ ಯಾವುದಾದರೊಂದನ್ನು  ಹೈಜಾಕ್ ಮಾಡಲಾಗುವುದು ಎಂದು ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಯಾಣಿಕರು ಕೊನೆ ಕ್ಷಣದಲ್ಲಿ ನಿಲ್ದಾಣದೊಳಗೆ ಪ್ರವೇಶಿಸದಂತೆ ಮತ್ತು ತಪಾಸಣೆಗೆ ಸಂಪೂರ್ಣ ಸಹಕರಿಸುವಂತೆ ಅಧಿಕಾರಿಗಳು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.
ಚೆನ್ನೈನ ಅರಿಗ್ನಾರ್ ಅಣ್ಮಾ ವಿಮಾನ ನಿಲ್ದಾಣದ ಭದ್ರತಾ ಮಟ್ಟವನ್ನು ಏಳುಪಟ್ಟು ಜಾಸ್ತಿ ಮಾಡಲಾಗಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಜವಾನರು ವಿಮಾನ ನಿಲ್ದಾಣದ ಆವರಣದಲ್ಲಿ ಗುಂಡು ತುಂಬಿದ ಕೋವಿಗಳು, ಶಸ್ತ್ರಾಸ್ತ್ರಗಳ ಸಹಿತ ಗಸ್ತು ತಿರುಗುತ್ತಿದ್ದಾರೆ. ಭಯೋತ್ಪಾದಕ ಸಂಘಟನೆ ವಿಮಾನವನ್ನು ಹೈಜಾಕ್ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಚೆನ್ನೈಯ ಕಾಮರಾಜ್ ದೇಶಿ ಟರ್ಮಿನಲ್ ಮತ್ತು ಅಂತಾರಾಷ್ಟ್ರೀಯ ಟರ್ಮಿನಲ್ ಗಳ ಬಳಿ ಪ್ರಯಾಣಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಪ್ರಯಾಣಿಕರ ಲಗ್ಗೇಜುಗಳನ್ನು ಮತ್ತು ಹ್ಯಾಂಡ್ ಬ್ಯಾಗ್ ಗಳನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸುವಂತೆ ಆದೇಶಿಸಲಾಗಿದೆ.
ಬೆದರಿಕೆ ಕರೆ ಹಿನ್ನೆಲೆಯಲ್ಲಿ ನಿನ್ನೆ ವಿಮಾನ ಭದ್ರತಾ ಸಮನ್ವಯ ಸಮಿತಿ ಸಭೆ ನಡೆಸಲಾಗಿತ್ತು.  

ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ವಿಮಾನ ನಿಲ್ದಾಣಗಳಿಂದ ಏಕಕಾಲಕ್ಕೆ ವಿಮಾನ ಹೈಜಾಕ್ ಮಾಡುವ ಬಗ್ಗೆ 6 ಹುಡುಗರ ತಂಡ ಚರ್ಚಿಸುತ್ತಿದ್ದರು ಎಂದು ಮಹಿಳೆಯೊಬ್ಬರಿಂದ ಇಮೇಲ್ ಬಂದಿದೆ. ಒಟ್ಟು 23 ಮಂದಿಯ ತಂಡ ವಿಮಾನವನ್ನು ಭಾನುವಾರ ಅಂದರೆ ಇಂದು ಅಪಹರಣ ಮಾಡಲಿದೆ ಎಂದು ತೀರ್ಮಾನಿಸಿದ್ದಾರೆ ಎಂಬುದಾಗಿ ಇಮೇಲ್ ನಲ್ಲಿ ಇದೆ. 

ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಾ ನಿರ್ದೇಶಕ ಒ.ಪಿ.ಸಿಂಗ್ ದೃಢಪಡಿಸಿದ್ದಾರೆ. ಹಲವು ಭದ್ರತಾ  ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ಧಾಣದ ನಿಯಂತ್ರಣ ಮತ್ತು ಗಸ್ತು ನೋಡಿಕೊಳ್ಳಲಾಗುತ್ತಿದೆ.

ಹಲವು ಭದ್ರತಾ ಯೋಧರನ್ನು ವಿಮಾನ ನಿಲ್ದಾಣಗಳಲ್ಲಿ ಈಗ ನಿಯೋಜಿಸಲಾಗಿದೆ.
ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ಜೊತೆ ನಗರ ಪೊಲೀಸ್ ಪಡೆ ಕೂಡ ಕಾರ್ಯಪ್ರವೃತ್ತವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com