ಪೆಟ್ರೋಲ್ ಬೆಲೆ ರೂ. 1.39, ಡೀಸೆಲ್ ರೂ.1.04 ಏರಿಕೆ

ಪಾಕ್ಷಿಕ ತೈಲ ಬೆಲೆ ಪರಿಷ್ಕರಣೆ ಆಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಾಕ್ಷಿಕ ತೈಲ ಬೆಲೆ ಪರಿಷ್ಕರಣೆ ಆಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗಿದೆ. 
ಲೀಟರ್ ಪೆಟ್ರೋಲ್ ಬೆಲೆ ರೂ.1.39 ಹಾಗೂ ಡೀಸೆಲ್ ದರ ರೂ.1.04 ರಷ್ಟು ಹೆಚ್ಚಳವಾಗಿದೆ. ಏಪ್ರಿಲ್.15 ವರೆಗೆ ನಗರದಲ್ಲಿ ಪೆಟ್ರೋಲ್ ದರ ರೂ.73 ಹಾಗೂ ಡೀಸೆಲ್ ಬೆಲೆ ರೂ.60.86 ಇತ್ತು. ಇದೀಗ ದರ ಪರಿಷ್ಕರಣೆಯಾಗಿದ್ದು, ಈ ಹಿಂದಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತಷ್ಟು ದುಬಾರಿಯಾಗಿದೆ. 
ಇದಕ್ಕೂ ಮುನ್ನ ಜ.15 ರಂದು ಪೆಟ್ರೋಲ್ ದರ ಪ್ರತೀ ಲೀಟರ್'ಗೆ ರೂ.0.42 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ ರೂ.1.03 ನಂತೆ ಏರಿಕೆಯಾತ್ತು. ಇದಾದ ಬಳಿಕ ಮಾರ್ಚ್ 31, 2017ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಪೆಟ್ರೋಲ್ ಬೆಲೆ ಲೀಟರ್ ಗೆ ರೂ.3.77, ಡೀಸೆಲ್ ಬೆಲೆ ಲೀಟರ್ ಗೆ ರೂ.2.91 ಇಳಿಕೆ ಮಾಡುವ ಮೂಲಕ ಗ್ರಾಹಕರ ಮೆಚ್ಚಿಗೆ ಗಳಿಸಿದ್ದವು. 
ದರ ಪರಿಷ್ಕರಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಅಧಿಕಾರಿಗಳು, ಪೆಟ್ರೋಲ್ ಬೆಲೆ ಲೀಟರ್ ಗೆ ರೂ.1.39 ಹಾಗೂ ಡೀಸೆಲ್ ಪ್ರತೀ ಲೀಟರ್ ಗೆ ರೂ.1.04ರಷ್ಟು ಏರಿಕೆ ಮಾಡಲಾಗಿದೆ. ಪರಿಷ್ಕೃತಗೊಂಡಿರುವ ದರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ ಎಂದು ಹೇಳಿದ್ದಾರೆ. 
ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಉತ್ಪನ್ನಗಳ ಬೆಲೆ ಹಾಗೂ INR-USD ವಿನಿಮಯ ದರದಲ್ಲಿ ಏರಿಕೆಯಾಗಿರುವ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com