ಅಲ್ಪ ಸಂಖ್ಯಾತರ ಮೀಸಲಾತಿ ಶೇ.4ರಿಂದ 12ಕ್ಕೆ ಏರಿಕೆ ಮಾಡಿದ ತೆಲಂಗಾಣ ಸರ್ಕಾರ!

ಮುಸ್ಲಿಮರ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ 12ಕ್ಕೆ ಏರಿಕೆ ಮಾಡುವ ವಿವಾದಿತ ಮೀಸಲಾತಿ ಮಸೂದೆಗೆ ತೆಲಂಗಾಣ ಸರ್ಕಾರ ವಿಧಾನಸಭೆಯ ಅನುಮೋದನೆ ಪಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಮುಸ್ಲಿಮರ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ 12ಕ್ಕೆ ಏರಿಕೆ ಮಾಡುವ ವಿವಾದಿತ ಮೀಸಲಾತಿ ಮಸೂದೆಗೆ ತೆಲಂಗಾಣ ಸರ್ಕಾರ ವಿಧಾನಸಭೆಯ ಅನುಮೋದನೆ ಪಡೆದಿದೆ.

ತೆಲಂಗಾಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಹಿಂದುಳಿದ ವರ್ಗದ ಮುಸ್ಲಿಮರ ಮತ್ತು ಹಿಂದುಳಿದ ಬುಡಕಟ್ಟು ಜನಾಂಗಗಳ ಮೀಸಲಾತಿಯನ್ನು ಶೇ.4ರಿಂದ 12ಕ್ಕೆ ಏರಿಕೆ ಮಾಡುವ ಮಸೂದೆಯನ್ನು ತೆಲಂಗಾಣ ಸರ್ಕಾರ  ಜಾರಿಗೊಳಿಸಿದ್ದು, ಬಿಜೆಪಿ ಸದಸ್ಯರ ವ್ಯಾಪಕ ವಿರೋಧ ಹಾಗೂ ಭಾರಿ ಕೋಲಾಹಲದ ನಡುವೆಯೇ ವಿವಾದಾತ್ಮಕ ಮಸೂದೆಗೆ ಅನುಮೋದನೆ ಪಡೆದಿದೆ.

ಸಿಎಂ ಕೆ ಚಂದ್ರ ಶೇಖರ ರಾವ್ ಅವರ ಈ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರದ ಕ್ರಮವನ್ನು ಬಲವಾಗಿ ಖಂಡಿಸಿರುವ ಬಿಜೆಪಿ ಪಕ್ಷದ ಸದಸ್ಯರು ಸದನದ ಒಳಗೆ ಹಾಗೂ ಹೊರಗೆ ವ್ಯಾಪಕ ಪ್ರತಿಭಟನೆ  ನಡೆಸಿದ್ದಾರೆ. ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸದನದಲ್ಲಿ ಕೋಲಾಹಲವೆಬ್ಬಿಸಿದ ಕಾರಣ ಬಿಜೆಪಿ ಐದು ಶಾಸಕರನ್ನು ಸದನದಿಂದ ಬಲವಂತವಾಗಿ ಹೊರಹಾಕಲಾಯಿತು. ಇದಾಗ್ಯೂ ಬಿಜೆಪಿ ಶಾಸಕರು  ಸದನದಲ್ಲಿ ತಮ್ಮ ಪ್ರತಿಭಟನೆ ಮುಂದುವರೆಸಿದರು. ಪ್ರತಿಭಟನೆಯ ನಡುವೆಯೇ ಮಸೂದೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಹಿಂದುಳಿದ ಬುಡಕಟ್ಟು ಜನಾಂಗ ಮತ್ತು ಹಿಂದುಳಿದ ಮುಸ್ಲಿಂ ವರ್ಗಗಳಿಗೆ ಔದ್ಯೋಗಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೆಲಂಗಾಣ ಸರ್ಕಾರ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com