ಎಚ್ಚರಿಕೆ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಗ್ರೂಪ್ ನಿರ್ವಾಹಕರೇ ಹೊಣೆ, ಜೈಲು

ವಾಟ್ಸ್ ಆಪ್, ಫೇಸ್ ಬುಕ್ ಗ್ರೂಪ್ ಗಳಲ್ಲಿ ಪೋಸ್ಟ್ ಆಗುವ ಆಕ್ಷೇಪಾರ್ಹ, ಸುಳ್ ಸುದ್ದಿಗಳಿಗೆ ಆ ಗ್ರೂಪ್ ನ ನಿರ್ವಾಹಕರೇ ಹೊಣೆಗಾರರಾಗುತ್ತಾರೆ ಹಾಗೂ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.
ಸಾಮಾಜಿಕ ಜಾಲತಾಣ
ಸಾಮಾಜಿಕ ಜಾಲತಾಣ
ವಾರಾಣಸಿ: ವಾಟ್ಸ್ ಆಪ್, ಫೇಸ್ ಬುಕ್ ಗ್ರೂಪ್ ಗಳಲ್ಲಿ ಪೋಸ್ಟ್ ಆಗುವ ಆಕ್ಷೇಪಾರ್ಹ, ಸುಳ್ ಸುದ್ದಿಗಳಿಗೆ ಆ ಗ್ರೂಪ್ ನ ನಿರ್ವಾಹಕರೇ ಹೊಣೆಗಾರರಾಗುತ್ತಾರೆ ಹಾಗೂ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. 
ವಾರಾಣಾಸಿಯಲ್ಲಿ ಸರ್ಕಾರದ ಅಧಿಕಾರಿಗಳು ಹೊರಡಿಸಿರುವ ಆದೇಶದ ಪ್ರಕಾರ ವಾಟ್ಸ್ ಆಪ್, ಫೇಸ್ ಬುಕ್ ಗಳ ಗ್ರೂಪ್ ಗಳಲ್ಲಿ ಪೋಸ್ಟ್ ಆಗುವ ಆಕ್ಷೇಪಾರ್ಹ, ಸುಳ್ ಸುದ್ದಿಗಳಿಗೆ ಗ್ರೂಪ್ ನ ನಿರ್ವಾಹಕರೇ ಹೊಣೆಗಾರರಾಗಿರುತ್ತಾರೆ. 
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯ ಜಿಲ್ಲಾಧಿಕಾರಿ ಹಾಗೂ ಹಿರಿಯ ಎಸ್ ಪಿ ಈ ಬಗ್ಗೆ ಆದೇಶ ಹೊರಡಿಸಿದ್ದು, ಕೋಮು ಭಾವನೆಗಳನ್ನು ಕೆರಳಿಸುವ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಗ್ರೂಪ್ ಗಳಲ್ಲಿ ಪೋಸ್ಟ್, ವಿಡಿಯೋ, ಫೋಟೋಗಳನ್ನು ಅಪ್ ಡೇಟ್ ಮಾಡಿದರೆ ಅದಕ್ಕೆ ಗ್ರೂಪ್ ನ ನಿರ್ವಾಹಕರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂಬ ಆದೇಶ ಹೊರಡಿಸಿದ್ದಾರೆ. 
ಸುಳ್ ಸುದ್ದಿ, ದಾರಿ ತಪ್ಪಿಸುವ ಸುದ್ದಿಗಳು ಪೋಸ್ಟ್ ಆಗಿದ್ದ ಗ್ರೂಪ್ ನ ನಿರ್ವಾಹಕರ ವಿರುದ್ಧ ಜಿಲ್ಲಾಡಳಿತ ಎಫ್ಐಆರ್ ದಾಖಲಿಸಿದ್ದು, ಇಂತಹ ಪ್ರಕರಣಗಳು ಸಂಭವಿಸಿದಾಗ ಗ್ರೂಪ್ ನ ನಿರ್ವಾಹಕರು ಪ್ರಚೋದನಾತ್ಮಕ ಪೋಸ್ಟ್ ಗಳನ್ನು ನಿರಾಕರಿಸಬೇಕು ಇಲ್ಲವೇ ಅವುಗಳನ್ನು ಗ್ರೂಪ್ ನಿಂದ ತೆಗೆದು ಹಾಕಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಸುಳ್ ಸುದ್ದಿ ಹಾಗೂ ಪ್ರಚೋದನಾತ್ಮಕ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಅನೇಕ ಬಾರಿ ಗ್ರೂಪ್ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾದ ಉದಾಹರಣೆಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com