12 ಹೊಸ ಎಕ್ಸ್ ಪ್ರೆಸ್ ವೇಗಳ ನಿರ್ಮಾಣ: ನಿತಿನ್ ಗಡ್ಕರಿ

ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಕನಿಷ್ಠ 12 ಹೊಸ ಎಕ್ಸ್ ಪ್ರೆಸ್ ವೇಗಳನ್ನು ಮುಂದಿನ ವರ್ಷ...
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
ಬಗ್ಪತ್(ಉ.ಪ್ರ): ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಕನಿಷ್ಠ 12 ಹೊಸ ಎಕ್ಸ್ ಪ್ರೆಸ್ ವೇಗಳನ್ನು ಮುಂದಿನ ವರ್ಷ ನಿರ್ಮಿಸಲಾಗುವುದು. ಅವುಗಳಲ್ಲಿ ಮೂರು ಈ ವರ್ಷವೇ ಆರಂಭವಾಗಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಪೂರ್ವ ಪೆರಿಫೆರಲ್ ಹೆದ್ದಾರಿ ಈಗಷ್ಟೇ ಆರಂಭವಾಗಿದೆ. ನಾವು ಅಂತಹ 12 ಎಕ್ಸ್ ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸಲಿದ್ದೇವೆ ಎಂದರು. 135 ಕಿಲೋ ಮೀಟರ್ ಉದ್ದದ ಪೂರ್ವ ಫೆರಿಫೆರಲ್ ಹೆದ್ದಾರಿಗಳ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿ ಅವರು ಮಾತನಾಡಿದರು.
ಇದು ರಸ್ತೆಯ ಎರಡೂ ಬದಿಗಳಿಂದ ಲಭ್ಯವಿರುವ ದೇಶದ ಮೊದಲ ನಿಯಂತ್ರಣ ಹೆದ್ದಾರಿಯಾಗಿದೆ. ಈ ರಸ್ತೆಗಳ ಮೂಲಕ ನಾವು ಅಂಡರ್ ಪಾಸ್ ಗಳನ್ನು ಯಾವುದೇ ಒತ್ತಡ ನಿವಾರಿಸಲು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು. ಈ ಹೆದ್ದಾರಿಯ ನಿರ್ಮಾಣ ಕಾರ್ಯ ಆಗಸ್ಟ್ ನಲ್ಲಿ ಪೂರ್ಣವಾಗುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com