ಹರಿಯಾಣ: ಭದ್ರತಾ ಸಿಬ್ಬಂದಿಗಳನ್ನು ತಳ್ಳಿ ಅಮಿತ್ ಶಾ ಭೇಟಿಗೆ ಯತ್ನ- ಇಬ್ಬರ ಬಂಧನ

ಭದ್ರತಾ ಸಿಬ್ಬಂದಿ ತಳ್ಳಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲು ಯತ್ನ ನಡೆಸಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿರುವುದಾಗಿ ಪೊಲೀಸರು ಶುಕ್ರವಾರ...
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
Updated on: 
ಚಂಡೀಗಢ: ಭದ್ರತಾ ಸಿಬ್ಬಂದಿ ತಳ್ಳಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲು ಯತ್ನ ನಡೆಸಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿರುವುದಾಗಿ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಮೂರು ದಿನಗಳ ಕಾಲ ಹರಿಯಾಣ ರಾಜ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭೇಟಡಿ ನೀಡಿದ್ದಾರೆ. ರೊಹ್ಟಕ್ ನಲ್ಲಿರುವ ಪ್ರವಾಸಿಗರ ಕಾಂಪ್ಲೆಕ್ಸ್ ನಲ್ಲಿ ಅಮಿತ್ ಶಾ ಅವರು ಆ.2-3 ರಂದು ತಂಗಿದ್ದಾರೆ. 
ಆಗಸ್ಟ್ 3 ರ ರಾತ್ರಿ ಪಾನಮತ್ತರಾಗಿ ಬಂದಿದ್ದ ಇಬ್ಬರು ವ್ಯಕ್ತಿಗಳು ಭದ್ರತಾ ಸಿಬ್ಬಂದಿಗಳನ್ನು ತಳ್ಳಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ಯತ್ನ ನಡೆಸಿದ್ದರು. ಈ ವೇಳೆ ಇಬ್ಬರನ್ನು ಬಂಧನಕ್ಕೊಳಪಡಿಸಲಾಯಿತು ಎಂದು ರೊಹ್ಟಕ್ ಎಸ್'ಪಿ ಪಂಕಜ್ ನಾಯಿನ್ ಅವರು ಹೇಳಿದ್ದಾರೆ. 
ಬಂಧಿತನ್ನು ಅಶೋಕ್ ಮತ್ತು ರಾಜೀಂದರ್ ಎಂಬು ಗುರ್ತಿಸಲಾಗಿದ್ದು, ಇಬ್ಬರೂ ರೊಹ್ಟಕ್ ನಿವಾಸಿಗಳಾಗಿದ್ದಾರೆ. ಪ್ರಸ್ತುತ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾನೂನು ಕೈಗೆತ್ತಿಗೊಳ್ಳಲು ಯಾರಿಗೂ ಬಿಡುವುದಿಲ್ಲ. ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com