ಡೋಕ್ಲಾಂ ವಿವಾದ: ಭೂತಾನ್ ಜತೆ ನಿರಂತರ ಸಂಪರ್ಕ: ಭಾರತ

ಡೋಕ್ಲಾಂ ಸಮಸ್ಯೆ ಪರಿಹಾರಕ್ಕಾಗಿ ಚೀನಾದೊಂದಿಗೆ ರಾಜತಾಂತ್ರಿಕವಾಗಿ ಸಂಪರ್ಕದಲ್ಲಿದ್ದು ಭೂತಾನ್ ಜತೆಗೂ ಸಹಕಾರದಿಂದಿದ್ದು ಪರಸ್ಪರ-ಸ್ವೀಕಾರಾರ್ಹ ಪರಿಹಾರ...
ಡೋಕ್ಲಾಂ ವಿವಾದ
ಡೋಕ್ಲಾಂ ವಿವಾದ
ನವದೆಹಲಿ: ಡೋಕ್ಲಾಂ ಸಮಸ್ಯೆ ಪರಿಹಾರಕ್ಕಾಗಿ ಚೀನಾದೊಂದಿಗೆ ರಾಜತಾಂತ್ರಿಕವಾಗಿ ಸಂಪರ್ಕದಲ್ಲಿದ್ದು ಭೂತಾನ್ ಜತೆಗೂ ಸಹಕಾರದಿಂದಿದ್ದು ಪರಸ್ಪರ-ಸ್ವೀಕಾರಾರ್ಹ ಪರಿಹಾರ ಹುಡುಕಲು ಪ್ರಯತ್ನಿಸಲಾಗುತ್ತಿದೆ ಎಂದು ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ. 
ಡೋಕ್ಲಾಂ ಸಮಸ್ಯೆಯನ್ನು ರಾಜತಾಂತ್ರಿಕ ಹಾಗೂ ಶಾಂತಿಯುತ ಮಾರ್ಗದಲ್ಲಿ ಪರಿಹರಿಸಿಕೊಳ್ಳುವುದು ಭಾರತದ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ. 
ಇನ್ನು ಡೋಕ್ಲಾಂ ಬಳಿ ಭಾರತ ತನ್ನ ಸೇನಾ ತುಕಡಿಯನ್ನು 400 ರಿಂದ 40ಕ್ಕೆ ಇಳಿಸಿದೆ ಎಂಬ ಚೀನಾದ ಹೇಳಿಕೆಯನ್ನು ಬಾಗ್ಲೆ ಅವರು ತಳ್ಳಿ ಹಾಕಿದ್ದಾರೆ. ಭೂತಾನ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದು ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com