600 ಬಾರಿ ಕದನ ವಿರಾಮ ಉಲ್ಲಂಘಿಸಿದೆ ಭಾರತ: ಪಾಕಿಸ್ತಾನ ಆರೋಪ

ಭಾರತದ ಗಡಿಯೊಳಗೆ ನುಸುಳಲು ಉಗ್ರರಿಗೆ ಸಹಾಯ ಮಾಡುತ್ತಿರುವುದು ಹಾಗಾ ಗಡಿಯಲ್ಲಿ ಪದೇ ಪದೇ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದರೂ ಭಾರತದ ವಿರುದ್ಧವೇ ಪಾಕಿಸ್ತಾನ ಆರೋಪ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಭಾರತದ ಗಡಿಯೊಳಗೆ ನುಸುಳಲು ಉಗ್ರರಿಗೆ ಸಹಾಯ ಮಾಡುತ್ತಿರುವುದು ಹಾಗಾ ಗಡಿಯಲ್ಲಿ ಪದೇ ಪದೇ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದರೂ ಭಾರತದ ವಿರುದ್ಧವೇ ಪಾಕಿಸ್ತಾನ ಆರೋಪ ಮಾಡಿದೆ. 
ಭಾರತ ಈ ವರೆಗೂ 600 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಪರಿಣಾಮ 34 ಮಂದಿ ನಾಗರೀಕರು ಸಾವನ್ನಪ್ಪಿದ್ದಾರೆಂದು ಪಾಕಿಸ್ತಾನ ಆರೋಪ ಮಾಡಿದೆ. 
ಈ ಕುರಿತಂತೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ನಫೀಜ್ ಝಕಾರಿಯಾ ಅವರು, ಕಾಶ್ಮೀರಿಗಳಲ್ಲದವರನ್ನು ಕಾಶ್ಮೀರದಲ್ಲಿ ನೆಲೆಯೂರುವಂತೆ ಮಾಡುತ್ತಿರುವ ಭಾರತ, ಕಾಶ್ಮೀರವನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ. 
ಈ ಬಗ್ಗೆ ಈಗಾಗಲೇ ಪಾಕಿಸ್ದಾನದ ವಿದೇಶಾಂಗ ವ್ಯವಹಾರಗಳ ಮಾಜಿ ಸಲಹೆಗಾರ ಸರ್ತಾಜ್ ಅಜೀಜ್ ಅವರು ವಿಶ್ವಸಂಸ್ಥೆಗೂ ಪತ್ರವನ್ನು ಪಡೆದಿದ್ದಾರೆ. 
ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಭಾರತ, ಈ ವರೆಗೂ 600 ಬಾರಿ ಕದನ ವಿರಾಮವನ್ನು ಉಲ್ಲಂಘನೆ ಮಾಡಿದೆ. ಪರಿಣಾಮ 34 ನಾಗರೀಕರು ಸಾವನ್ನಪ್ಪಿದ್ದಾರೆಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com