ಆ.13 ರಂದು ವರ್ಲ್ಡ್ ಪೀಸ್, ಹಾರ್ಮೊನಿ ಕಾನ್ಕ್ಲೇವ್ ನ್ನು ಉದ್ದೇಶಿಸಿ ಮಾತನಾಡಿರುವ ಯೋಗ ಗುರು ಬಾಬಾ ರಾಮ್ ದೇವ್, ಚೀನಾ ಒಂದು ವೇಳೆ ಶಾಂತಿ ಮಾತುಕತೆಗೆ ಮುಕ್ತವಾಗಿದ್ದರೆ ದಲೈ ಲಾಮ ಇಲ್ಲಿರುತ್ತಿರಲಿಲ್ಲ. ಭಾರತ ಶಾಂತಿಯುತ ಮಾತುಕತೆ ಬಗ್ಗೆ ಮಾತನಾಡಿದಾಗಲೆಲ್ಲಾ ಚೀನಾ ಯುದ್ಧದ ಬೆದರಿಕೆ ಹಾಕಿದೆ, ಅಷ್ಟೇ ಅಲ್ಲದೇ ಅದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಭಾರತವನ್ನು ಕೇಳಿದೆ ಎಂದು ರಾಮ್ ದೇವ್ ಹೇಳಿದ್ದಾರೆ.