
ನವದೆಹಲಿ: ಇಡೀ ರಾಷ್ಟ್ರವೇ ಇಂದು 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದು, ಖ್ಯಾತ ಸರ್ಚ್ ಎಂಜಿನ್ ಗೂಗಲ್ ಕೂಡ ಆಕರ್ಷಕ ಮತ್ತು ವಿಭಿನ್ನ ಡೂಡಲ್ ಬಿಡಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಅಚರಿಸಿದೆ.
ತೈಲವರ್ಣದಲ್ಲಿ ಚಿತ್ರಿಸಿದ ಸಂಸತ್ ಭವನದ ಮುಂಭಾಗದಲ್ಲಿ ರಾಷ್ಟ್ರಧ್ವಜವನ್ನು ನೆನಪಿಸುವ ಅಶೋಕತ ಚಕ್ರ ಹಾಗೂ ಅದರ ಅಕ್ಕಪಕ್ಕದಲ್ಲಿ ನವಿಲುಗಳನ್ನು ಆಕರ್ಷಕವಾಗಿ ಚಿತ್ರಿಸಲಾಗಿದೆ. ಈ ತೈಲವರ್ಣದ ಚಿತ್ರವನ್ನು ಗೂಗಲ್ ತನ್ನ ಮುಖಪುಟದಲ್ಲಿ ಹಾಕುವ ಮೂಲಕ ಭಾರತ ಪ್ರಜೆಗಳಿಗೆ 71ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದೆ.
ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ತನ್ನ ವಿಶೇಷ ಡೂಡಲ್ ಗಳ ಮೂಲಕ ದೇಶದ ಗಮನ ಸೆಳೆದಿದ್ದ ಗೂಗಲ್, ಈ ಹಿಂದೆ ಡಾ.ರಾಜ್ ಕುಮಾರ್ ಅವರ ಭಾವ ಚಿತ್ರವನ್ನು ಅವರ ಜನ್ಮ ದಿನಾಚರಣೆ ವೇಳೆ ತನ್ನ ಮುಖಪುಟದಲ್ಲಿ ಹಾಕುವ ಮೂಲಕ ಕನ್ನಡಿಗರ ಮನ ಸೆಳೆದಿತ್ತು. ಇದೀಗ ಸ್ವಾತಂತ್ರ್ಯೋತ್ಸವದ ವಿಶೇಷ ಚಿತ್ರವನ್ನು ಮುಖಪುದಲ್ಲಿ ಹಾಕಿ ಶುಭ ಕೋರಿದೆ.
ಮುಂಬೈ ಮೂಲದ ಕಲಾವಿದನಿಂದ ತಯಾರಾದ ಚಿತ್ರ
ಇನ್ನು ಇಂದಿನ ವಿಶೇಷ ಡೂಡಲ್ ಅನ್ನು ಮುಂಬೈ ಮೂಲಕ ಕಲಾವಿದರಾದ ಸಬೀನಾ ಕಾರ್ನಿಕ್ ಅವರು ಚಿತ್ರಿಸಿದ್ದು, ಸಬೀನಾ ಕಾರ್ನಿಕ್ ತಮ್ಮ ಪೇಪರ್ ಕಲೆಗಳಿಂದ ಖ್ಯಾತಿ ಪಡೆದಿದ್ದಾರೆ.
Advertisement