ಡೊಕ್ಲಾಮ್ ಬಿಕ್ಕಟ್ಟು: ನಾವು ಭಾರತಕ್ಕೆ ಪ್ರವೇಶಿಸಿದರೆ ಅಸ್ತವ್ಯಸ್ಥವಾಗುತ್ತದೆ ಚೀನಾ ವಿದೇಶಾಂಗ ಇಲಾಖೆ ಎಚ್ಚರಿಕೆ

ಡೋಕ್ಲಾಮ್ ಬಿಕ್ಕಟ್ಟಿನ ಬಗ್ಗೆ ಚೀನಾದ ವಿದೇಶಾಂಗ ಇಲಾಖೆ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ನಾವು ಭಾರತವನ್ನು ಪ್ರವೇಶಿಸಿದರೆ ಭಾರತ ಅಸ್ತವ್ಯಸ್ಥವಾಗಲಿದೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಡೋಕ್ಲಾಮ್ ಬಿಕ್ಕಟ್ಟಿನ ಬಗ್ಗೆ ಚೀನಾದ ವಿದೇಶಾಂಗ ಇಲಾಖೆ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ನಾವು ಭಾರತವನ್ನು ಪ್ರವೇಶಿಸಿದರೆ ಭಾರತ ಅಸ್ತವ್ಯಸ್ಥವಾಗಲಿದೆ ಎಂದು ಹೇಳಿದೆ. 
ಡೊಕ್ಲಾಮ್ ನಲ್ಲಿ ಚೀನಾ ರಸ್ತೆ ನಿರ್ಮಿಸುವುದರಿಂದ ಭಾರತಕ್ಕೆ ಅಪಾಯ ಉಂಟಾಗಲಿದೆ ಎಂಬ ಭಾರತದ ಪ್ರತಿಪಾದನೆ ಹಾಸ್ಯಾಸ್ಪದ ಹಾಗೂ ದುರಾಚಾರದ ನಡೆ ಎಂದು ಹೇಳಿದೆ. ಚೀನಾದ ಸಾರ್ವಭೌಮತೆಯನ್ನು ಅತಿಕ್ರಮಿಸಲು ಯಾವುದೇ ದೇಶಕ್ಕೆ ಚೀನ ಅವಕಾಶ ನೀಡುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದ್ದು, ಚೀನಾ ಗಡಿಯನ್ನು ಭಾರತವೇ ಅಕ್ರಮವಾಗಿ ಪ್ರವೇಶಿಸಿದೆ ಎಂದು ಚೀನಾ ಎಂದಿನಂತೆ ಆರೋಪಿಸಿದೆ. 
ಒಂದು ವೇಳೆ ಭಾರತದ ಲಾಜಿಕ್ ನ್ನು ಒಪ್ಪುವುದೇ ಆದರೆ, ನಡೆಯುತ್ತಿರುವ ಕಾಮಗಾರಿಯನ್ನು ಸಹಿಸದ ನೆರೆಯವರು ಬಂದು ದಾಳಿ ನಡೆಸಬಹುದು ಎಂಬುದನ್ನು ಒಪ್ಪಿದಂತಾಗುತ್ತದೆ. ಹಾಗಾದರೆ ಭಾರತದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಚೀನಾಗೆ ಅಪಾಯವಾಗುತ್ತಿದೆ ಎಂದು ಹೇಳಿ ಭಾರತದ ಮೇಲೆ ದಾಳಿ ನಡೆಸಲು ಸಾಧ್ಯವೇ ಎಂದು ಚೀನಾ ಪ್ರಶ್ನಿಸಿದೆ. 
ಭಾರತಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ, ಈಗಲೂ ಸಕಾರಾತ್ಮಕ ನಡೆಯಿಂದ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕೆಂದು ಆಗ್ರಹಿಸುತ್ತಿರುವುದಾಗಿ ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com