ಪರಿಸರವನ್ನು ಗಮನದಲ್ಲಿಟ್ಟುಕೊಂಡು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ್ದಕ್ಕೆ ಬಹಳ ಸಂತೋಷವಾಗುತ್ತಿದೆ. ಅಕ್ಟೋಬರ್ 2 ರಂದು ಸ್ವಚ್ಧ ಭಾರತ ಅಭಿಯಾನ 3 ವರ್ಷಗಳನ್ನು ಪೂರೈಸಲಿದೆ. 'ಸ್ವಚ್ಛತಾ ಹೇ ಸೇವಾ' ಗಾಂಧಿ ಜಯಂತಿ ದಿನ ಹತ್ತಿರ ಬರುತ್ತಿದ್ದು, ಶುಚಿತ್ವವನ್ನು ಗಮನದಲ್ಲಿಟ್ಟುಕೊಂಡು ಶುದ್ಧತೆಯನ್ನು ಕೇಂದ್ರೀಕರಿಸಲು ಗಾಂಧಿ ಜಯಂತಿಯಂದು ಚಳುವಳಿಯನ್ನು ಪ್ರಾರಂಭಿಸೋಣ. ಎಲ್ಲಾ ಹಬ್ಬಗಳಂದು ಸ್ವಚ್ಛತೆಯನ್ನು ಕಾಪಾಡೋಣ. ಭಾರತ ವೈವಿಧ್ಯತೆಯ ನಾಡಾಗಿದ್ದು, ನಮ್ಮ ಎಲ್ಲಾ ಹಬ್ಬಗಳು ಪ್ರಕೃತಿಗೆ ಹಾಗೂ ರೈತ ಕಲ್ಯಾಣಕ್ಕೆ ಸಂಬಂಧಪಟ್ಟಿವೆ.
ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿದ್ದ ಗುಜರಾತ್ ಧನೆರಾದಲ್ಲಿದ್ದ 22 ದೇವಾಲಯಗಳು ಹಾಗೂ 3 ಮಸೀದಿಗಳನ್ನು ಜಮಾತ್ ಉಲೆಮಾ ಇ ಹಿಂದ್ ಸ್ವಯಂ ಸೇವಕರು ಸ್ವಚ್ಛಗೊಳಿಸಿದ್ದಾರೆ. ಇಂತಹ ಕಾರ್ಯಗಳನ್ನು ಮೆಚ್ಚಲೇಬೇಕು.
ಇಂದು 2,30,000 ಗ್ರಾಮಗಳನ್ನು ಮಲವಿಸರ್ಜನೆ ಮುಕ್ತ ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ. ಶೇ.67 ರಷ್ಟು ಜನತೆ ಇಂದು ಶೌಚಾಲಯಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಹಿಂದೆ ಇದರ ಶೇಕಡಾವಾರು 39 ರಷ್ಟಿತ್ತು. ನಮ್ಮ ನಾಗರೀಕರ ಮೇಲೆ ನಂಬಿಕೆ ಇಡುವುದು ಅತ್ಯಂತ ಪ್ರಮುಖವಾದದ್ದು. ನಾವು ಭಾರತದ ಬಡವರನ್ನು ನಂಬಬೇಕು ಎಂದಿದ್ದಾರೆ.
ಇದೇ ವೇಳೆ ರಾಷ್ಟ್ರೀಯ ಕ್ರೀಡಾ ದಿನ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಮಾತನಾಡಿರುವ ಅವರು, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇಂದಿನ ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಶೀಘ್ರದಲ್ಲಿಯೇ ಕ್ರೀಡಾ ಸಚಿವಾಲಯ 'ಸ್ಪೋರ್ಟ್ಸ್ ಟ್ಯಾಲೆಂಟ್ ಸರ್ಚ್ ಪೋರ್ಟಲ್' ಪ್ರಾರಂಭ ಮಾಡಲಿದೆ. ಫಿಫಾ ಅಂಡರ್-17 ವಿಶ್ವಕಪ್ ಆಡಲು ಭಾರತಕ್ಕೆ ಬರುತ್ತಿರುವ ಕ್ರೀಡಾಪಟುಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.