ಡೋಕ್ಲಾಮ್ ನಿಂದ ಉಭಯ ದೇಶಗಳ ಸೇನಾ ಪಡೆ ವಾಪಸ್ ನಿರ್ಧಾರ ಸ್ವಾಗತಿಸಿದ ಭೂತಾನ್

ಸಿಕ್ಕಿಂನ ಡೋಕ್ಲಾಂ ನಲ್ಲಿ ಬೀಡುಬಿಟ್ಟಿದ್ದ ಉಭಯ ದೇಶಗಳ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಉಭಯ ದೇಶಗಳು ಒಪ್ಪಿಗೆ ನೀಡಿರುವುದನ್ನು ಭೂತಾನ್ ಸ್ವಾಗತಿಸಿದೆ.
ಡೊಕ್ಲಾಮ್
ಡೊಕ್ಲಾಮ್
ಭೂತಾನ್: ಸಿಕ್ಕಿಂನ ಡೋಕ್ಲಾಂ ನಲ್ಲಿ ಬೀಡುಬಿಟ್ಟಿದ್ದ ಉಭಯ ದೇಶಗಳ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು  ಉಭಯ ದೇಶಗಳು ಒಪ್ಪಿಗೆ ನೀಡಿರುವುದನ್ನು ಭೂತಾನ್ ಸ್ವಾಗತಿಸಿದೆ. 
ಭೂತಾನ್ ನ ವಿದೇಶಾಂಗ ಇಲಾಖೆ ಅಧಿಕೃತ ಹೇಳಿಕೆ ನೀಡಿದ್ದು, ಭಾರತ-ಚೀನಾದ ನಡೆಯಿಂದ ಡೊಕ್ಲಾಮ್ ನಲ್ಲಿ ಶಾಂತಿ ಉಂಟಾಗಲು ಸಹಕಾರಿ ಎಂದು ಭೂತಾನ್ ಅಭಿಪ್ರಾಯಪಟ್ಟಿದೆ. ಡೊಕ್ಲಾಮ್ ನಿಂದ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಭಾರತ-ಚೀನಾದ ನಿರ್ಧಾರದಿಂದ ಡೊಕ್ಲಾಮ್ ಪ್ರದೇಶದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗುವುದು ಸಾಧ್ಯವಾಗಲಿದೆ ಎಂದು ಭೂತಾನ್ ನ ಅಧಿಕೃತ ಪ್ರಕಟಣೆ ತಿಳಿಸಿದೆ. 
ಬ್ರಿಕ್ಸ್ ಶೃಂಗಸಭೆ ಪ್ರಾರಂಭವಾಗುವುದಕ್ಕೂ ಒಂದು ವಾರ ಇರಬೇಕಾದರೆ ಚೀನಾ ಡೊಕ್ಲಾಮ್ ನಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com