ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಲಕ್ಷಣ ಪ್ರಕರಣವೊಂದು ವರದಿಯಾಗಿದ್ದು ಟ್ಯಾಕ್ಸಿ ಚಾಲಕನೊಬ್ಬ ಹೆಣ್ಣು ನಾಯಿ ಮರಿ ಮೇಲೆ ಅತ್ಯಾಚಾರ ನಡೆಸಿ ಕೊಂದಿರುವ ಘಟನೆ ನಡೆದಿದೆ...
ದೆಹಲಿಯ ನಾರೈನಾ ಪ್ರದೇಶದ ನಿವಾಸಿಯಾದ 34 ವರ್ಷದ ನರೇಶ್ ಕುಮಾರ್ ಎಂಬಾತ ತಾನು ನಾಯಿ ಮರಿಯ ಮೇಲೆ ಅತ್ಯಾಚಾರ ನಡೆಸಿ ಕೊಂದಿರುವುದಾಗಿ ಹೆಮ್ಮೆ ಪಡುತ್ತಿದ್ದ ಎನ್ನಲಾಗಿದೆ. ಕಳೆದ ಆಗಸ್ಟ್ 25ರಂದು ನರೇಶ್ ಕುಡಿದ ಮತ್ತಿನಲ್ಲಿ ನಾಯಿಮರಿಯ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಮಾಧ್ಯಮಗಳು ವರದಿಯಾಗಿದೆ.
ಇನ್ನು ನಾಯಿಮರಿಯ ಗುಪ್ತಾಂಗದಲ್ಲಿ ಮಿತಿ ಮೀರಿದ ರಕ್ತಸ್ರಾವ ಮತ್ತು ಆಘಾತದಿಂದ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ.
ಮೃತ ಹೆಣ್ಣು ನಾಯಿಮರಿಯನ್ನು ನರೇಶ್ ಸಹೋದರನ ಸಹಾಯದೊಂದಿಗೆ ನಾರೈನ ಕೈಗಾರಿಕಾ ಪ್ರದೇಶದ ಬಳಿ ಹೂತುಹಾಕಿದ್ದ. ಸದ್ಯ ಆರೋಪಿ ನರೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.