ಹೈದರಾಬಾದ್: ಬಾಲಕಿಯನ್ನು ಬಿಸಿ ಪಾತ್ರೆಗೆ ಹಾಕಿದ ದಂಪತಿಯ ಬಂಧನ

ನಾಲ್ಕು ವರ್ಷದ ಬಾಲಕಿಯನ್ನು ಕರಿಯುವ ಬಾಣಲೆಗೆ ಹಾಕಿ, ಹಿಂಸಿಸಿದ ಆರೋಪದ ಮೇಲೆ ದಂಪತಿಗಳನ್ನು ಹೈದರಾಬಾದ್ ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ನಾಲ್ಕು ವರ್ಷದ ಬಾಲಕಿಯನ್ನು ಕರಿಯುವ ಬಾಣಲೆಗೆ ಹಾಕಿ, ಹಿಂಸಿಸಿದ ಆರೋಪದ ಮೇಲೆ ದಂಪತಿಗಳನ್ನು ಹೈದರಾಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಾಲಕಿಗೆ ಚಿತ್ರ ಹಿಂಸೆ ನೀಡಿದ ದಂಪತಿಗಳನ್ನು ಲಲಿತಾ ಎಂ ಹಾಗೂ ಅವರ ಎರಡನೇ ಪತಿ ವೈ ಪ್ರಕಾಶ್ ಎಂದು ಗುರುತಿಸಲಾಗಿದ್ದು, ಮೊದಲ ಪತಿಯ ಮಗಳನ್ನು ತೊಡೆಗುಹಾಕುವುದಕ್ಕಾಗಿ ದಂಪತಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂಗ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
25 ವರ್ಷದ ಈ ದಂಪತಿ, ಅಡಿಗೆ ಕೆಲಸ ಹಾಗೂ ಪತಿ ವಾಚ್ ಮನ್ ಕೆಲಸ ಮಾಡುತ್ತಿದ್ದು, ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಲಲಿತಾ, ಪ್ರಕಾಶ್ ಅವರೊಂದಿಗೆ ಇತ್ತೀಚಿಗೆ ಮದುವೆಯಾಗಿದ್ದರು. 
ತಾಯಿ ಲಲತಿ ಮಗವನ್ನು ಸುಡುವ ಬಾಣಲೆ ಮೇಲೆ ಕುಡಿಸಿದ್ದು, ಬಾಲಕಿಯ ದೇಹದಲ್ಲಿ ಸುಟ್ಟ ಗಾಯಳು ಪತ್ತೆಯಾಗಿವೆ. ಕಳೆದ ನಾಲ್ಕು-ಐದು ದಿನಗಳ ಹಿಂದೆ ಬಾಲಕಿಗೆ ಈ ರೀತಿ ಚಿತ್ರ ಹಿಂಸೆ ನೀಡಿರುವ ಸಾಧ್ಯತೆ ಇದೆ ಎಂದು ಎಸ್ ಆರ್ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಂಡಿ ವಹೀದುದ್ದೀನ್ ಅವರು ಹೇಳಿದ್ದಾರೆ.
ದಂಪತಿ ಈ ಮಗು ರಸ್ತೆ ಬದಿ ಸಿಕ್ಕಿದೆ ಎಂದು ಹೇಳಿ ಮಹಿಳೆಯರು ಮತ್ತು ಮಕ್ಕಳಿಗೆ ಸಮಗ್ರ ಬೆಂಬಲ ನೀಡುವ ಕೇಂದ್ರಕ್ಕೆ ಸೇರಿಸಲು ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com