ಚೆನ್ನೈ: ಕುಡಿದ ಮತ್ತಿನಲ್ಲಿ ಆಡಿ ಕಾರೆಂದು ಆಂಬುಲೆನ್ಸ್‌ ಚಲಾಯಿಸಿಕೊಂಡು ಮನೆಗೆ ತೆರಳಿದ ಉದ್ಯಮಿ

ನಗರದ ಉದ್ಯಮಿಯೊಬ್ಬರು ಕಂಠಪೂರ್ತಿ ಕುಡಿದು ತನ್ನ ಐಷಾರಾಮಿ ಆಡಿ ಕಾರನ್ನು ಬಿಟ್ಟು ಆಸ್ಪತ್ರೆಯಲ್ಲಿದ್ದ ಆಂಬ್ಯುಲೆನ್ಸ್ ಅನ್ನು ಚಾಲನೆ ಮಾಡಿಕೊಂಡು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಚೆನ್ನೈ: ನಗರದ ಉದ್ಯಮಿಯೊಬ್ಬರು ಕಂಠಪೂರ್ತಿ ಕುಡಿದು ತನ್ನ ಐಷಾರಾಮಿ ಆಡಿ ಕಾರನ್ನು ಬಿಟ್ಟು ಆಸ್ಪತ್ರೆಯಲ್ಲಿದ್ದ ಆಂಬ್ಯುಲೆನ್ಸ್ ಅನ್ನು ಚಾಲನೆ ಮಾಡಿಕೊಂಡು ಮನೆ ತಲುಪಿದ ವಿಚಿತ್ರ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ. 
ನಿನ್ನೆ ರಾತ್ರಿ ಉದ್ಯಮಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮಿತ್ರನನ್ನು ತನ್ನ ಆಡಿ ಕಾರ್‌ನಲ್ಲಿ ನುಂಗಂಬಾಕಂನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಬಂದಿದ್ದಾನೆ, ಬಳಿಕ ಕುಡಿದ ಮತ್ತಿನಲ್ಲಿ ತನ್ನ ಆಡಿ ಕಾರನ್ನು ಅಲ್ಲೇ ಬಿಟ್ಟು ಹತ್ತಿರದಲ್ಲಿ ನಿಂತಿದ್ದ ಆಂಬುಲೆನ್ಸ್, ಮಾರುತಿ ಓಮಿನಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.
ಉದ್ಯಮಿ ಮನೆ ಆಸ್ಪತ್ರೆಯಿಂದ 13 ಕಿಮೀ ದೂರದಲ್ಲಿದೆ. ಮನೆ ತಲುಪುವವರೆಗೂ ತಾನು ತನ್ನ ಆಡಿ ಕಾರನ್ನು ಬಿಟ್ಟು ಆಸ್ಪತ್ರೆಯ ಮಾರುತಿ ಓಮ್ನಿ ಕಾರನ್ನು ತಂದಿದ್ದೇನೆ ಅನ್ನೋದು ಅವರಿಗೆ ಗೊತ್ತಾಗಿರಲಿಲ್ಲ. ಬೆಳಗಿನ ಜಾವ 3 ಗಂಟೆ ವೇಳೆಗೆ ಆಂಬ್ಯುಲೆನ್ಸ್ ನಾಪತ್ತೆಯಾಗಿರೋದನ್ನು ಆಸ್ಪತ್ರೆಯ ಸಿಬ್ಬಂದಿ ಗಮನಿಸಿದ್ದಾರೆ. ಬಳಿಕ ಯಾರೋ ಆಂಬುಲೆನ್ಸ್ ಕಳವು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಸುಮಾರು ಹೊತ್ತಿನ ಬಳಿಕ ತಾನು ಓಮಿನಿ ಕಾರು ತಂದಿರುವುದನ್ನು ಮನಗಂಡು ಕೂಡಲೇ ತನ್ನ ನೌಕರನಿಗೆ ಆಡಿ ಕಾರು ತರುವಂತೆ ಹೇಳಿದ್ದಾನೆ. ' ಆಸ್ಪತ್ರೆಗೆ ಓಮಿನಿ ಕಾರು ತಂದ ಯುವಕ ನಮ್ಮ ಬಳಿಕ ಕ್ಷಮೆ ಕೇಳಿದ್ದಾನೆ, ಅಲ್ಲದೇ ಆತನ ಮಾಲೀಕ ಪ್ರಮಾದವಶಾತ್ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com