ಬಿಹಾರ ರೈಲ್ವೆ ನಿಲ್ದಾಣದ ಮೇಲೆ ನಕ್ಸಲರ ದಾಳಿ, ಇಬ್ಬರು ಅಧಿಕಾರಿಗಳ ಅಪಹರಣ

ಬಿಹಾರದಲ್ಲಿ ಮತ್ತೆ ನಕ್ಸಲರ ದಾಳಿ ಮುಂದುವರೆದಿದ್ದು, ಮಸೂದನ್ ರೈಲ್ವೆ ನಿಲ್ದಾಣದ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ನಕ್ಸಲರು ಇಬ್ಬರು ಅಧಿಕಾರಿಗಳನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಧಾಳಿಗೊಳಗಾದ ರೈಲ್ವೇ ನಿಲ್ದಾಣ
ಧಾಳಿಗೊಳಗಾದ ರೈಲ್ವೇ ನಿಲ್ದಾಣ
ಪಾಟ್ನಾ: ಬಿಹಾರದಲ್ಲಿ ಮತ್ತೆ ನಕ್ಸಲರ ದಾಳಿ ಮುಂದುವರೆದಿದ್ದು, ಮಸೂದನ್ ರೈಲ್ವೆ ನಿಲ್ದಾಣದ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ನಕ್ಸಲರು ಇಬ್ಬರು ಅಧಿಕಾರಿಗಳನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮಂಗಳವಾರ ರಾತ್ರಿ ರೈಲ್ವೇ ನಿಲ್ದಾಣದ ಮೇಲೆ ದಾಳಿ ನಡೆಸಿದ ನಕ್ಸಲರು, ನಿಲ್ದಾಣದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಅಪಹರಣ  ಮಾಡಿದ್ದಾರೆ ಎನ್ನಲಾಗಿದೆ. ಅಧಿಕಾರಗಳು ಮಾಹಿತಿ ನೀಡಿರುವಂತೆ ನಿಲ್ದಾಣದ ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ಮತ್ತು ರೈಲ್ವೆ ನಿಲ್ದಾಣದಲ್ಲಿದ್ದ ಮತ್ತೋರ್ವ ಅಧಿಕಾರಿಯನ್ನು ನಕ್ಸಲರು ಅಪಹರಣಗೈದಿದ್ದಾರೆ ಎಂದು ಹೇಳಲಾಗಿದೆ.
ಇಲ್ಲಿನ ವಿಭಾಗೀಯ ರೈಲ್ವೆ ಅಧಿಕಾರಿ ಮಾಲ್ದಾ ಅವರಿಗೆ ಅಪಹರಣಕ್ಕೊಳಗಾಗಿರುವ ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್‍‍ನಿಂದ ಕರೆ ಬಂದಿದೆ. ಮಸೂದನ್‍ ನಲ್ಲಿ ರೈಲು ಸಂಚರಿಸಿದರೆ ಅಪಹರಿಸಿರುವ ರೈಲ್ವೆ ಅಧಿಕಾರಿಗಳನ್ನು ಹತ್ಯೆ  ಮಾಡುವುದಾಗಿ ನಕ್ಸಲರು ಬೆದರಿಕೆಯೊಡ್ಡಿದ್ದಾರೆ ಎಂದು ಮಾಲ್ದಾ ಹೇಳಿದ್ದಾರೆ. ಆದಾಗ್ಯೂ, ಪ್ರಯಾಣಿಕರು ಬೇರೆ ದಾರಿಯಾಗಿ ಪ್ರಯಾಣ ಕೈಗೊಳ್ಳಬೇಕೆಂದು ರೈಲ್ವೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com