ವಲಸಿಗರನ್ನು ಅಮೆರಿಕ ಪ್ರವೇಶಿಸುವುದರಿಂದ ನಿರ್ಬಂಧ ವಿಧಿಸುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಟೆಕ್ ವೀಸಾಗಳಿಗೆ ಕಡಿವಾಣ ಹಾಕಿದ್ದರು. ಆದರೆ ಕೆನಡಾದ ಪ್ರಧಾನಿಯ ನೇತೃತ್ವದ ಸರ್ಕಾರದ ಗ್ಲೋಬಲ್ ಸ್ಕಿಲ್ಸ್ ಸ್ಟ್ರಾಟಜಿ ಗಮನ ಸೆಳೆಯುತ್ತಿದ್ದು, ಕೆನಡಾದ ಫಾಸ್ಟ್-ಟ್ರಾಕ್ ವೀಸಾ ಯೋಜನೆ ಪ್ರಾರಂಭವಾದಾಗಿನಿಂದ ಬ್ರೆಜಿಲ್ ನವರೂ ಸೇರಿದಂತೆ 2,000 ನೌಕರರು ಕೆನಡಾ ತಲುಪಿದ್ದಾರೆ.