ಗೋಹತ್ಯೆ ಮಾಡಿದ ಆರೋಪ ಸಂಬಂಧ ಉತ್ತರಪ್ರದೇಶದ ಖಟೌಲಿ ಪೊಲೀಸರು ಇಬ್ಬರು ಬಾಲಕಿಯರು, ಮೂವರು ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧನಕ್ಕೊಳಪಡಿಸಿದ್ದರು. ಮನೆಯೊಂದರಲ್ಲಿ 10 ಕೆಜಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಬಳಿಕ ಸ್ಥಳೀಯ ನ್ಯಾಯಾಲಯದ ಎದುರು 9 ಮಂದಿಯನ್ನು ಹಾಜರುಪಡಿಸಲಾಗಿತ್ತು.