ಹೆಚ್-1ಬಿ ವೀಸಾ ಕುರಿತು ಟ್ರಂಪ್ ಆದೇಶದ ಸಾಧ್ಯತೆ ಇಲ್ಲ: ಶಾಲಭ್ ಕುಮಾರ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಹೆಚ್-1 ಬಿ ವೀಸಾ ಕುರಿತು ಹೊಸ ಕಾರ್ಯಕಾರಿ ಆದೇಶ ಹೊರಡಿಸುವ ಯೋಜನೆಗಳಿಲ್ಲ ಎಂದು ಅಧ್ಯಕ್ಷರ ಬೆಂಬಲಿಗ ಭಾರತೀಯ-ಅಮೆರಿಕನ್ ಶಾಲಭ್ ಕುಮಾರ್ ಹೇಳಿದ್ದಾರೆ.
ಶಾಲಭ್ ಕುಮಾರ್
ಶಾಲಭ್ ಕುಮಾರ್
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಹೆಚ್-1 ಬಿ ವೀಸಾ ಕುರಿತು ಹೊಸ ಕಾರ್ಯಕಾರಿ ಆದೇಶ ಹೊರಡಿಸುವ ಯೋಜನೆಗಳಿಲ್ಲ ಎಂದು ಅಧ್ಯಕ್ಷರ ಬೆಂಬಲಿಗ ಭಾರತೀಯ-ಅಮೆರಿಕನ್ ಶಾಲಭ್ ಕುಮಾರ್ ಹೇಳಿದ್ದಾರೆ. 
ಭಾರತೀಯ ಐಟಿ ಕ್ಷೇತ್ರದಲ್ಲಿ ಆತಂಕಕ್ಕೆ ಕಾರಣವಾಗಿರುವ ಅಮೆರಿಕಾದ ಹೆಚ್-1 ಬಿ ವೀಸಾ ನೀತಿಯ ಗೊಂದಲಗಳ ಬಗ್ಗೆ ಅಮೆರಿಕ ಅಧ್ಯಕ್ಷರ ಬೆಂಬಲಿಗ ಶಾಲಭ್ ಕುಮಾರ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದು, ಹೆಚ್-1 ಬಿ ವೀಸಾಗಳ   ಅಗತ್ಯತೆ ಹೆಚ್ಚಿಗೆ ಇರಲಿದೆ.  ಭಾರತದಿಂದ ಹೆಚ್-1 ಬಿ ವೀಸಾ ಪಡೆಯುವವರ ಸಂಖ್ಯೆ ಏರಿಕೆಯಾಗಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಅಮೆರಿಕಾದ ಆರ್ಥಿಕ ಬೆಳವಣಿಗೆಗೆ ಐಟಿ ಕ್ಷೇತ್ರ ಮಹತ್ವದ ಪಾತ್ರ ವಹಿಸಲಿದೆ. ಅಮೆರಿಕಾದಲ್ಲಿ ಐಟಿ ಉದ್ಯೋಗಿಗಳ ಅಗತ್ಯತೆ ಹೆಚ್ಚು ಇದ್ದು, ಭಾರತೀಯ ಐಟಿ ಉದ್ಯೋಗಿಗಳಿಂದ ಮಾತ್ರ ಕೊರತೆಯನ್ನು ನೀಗಲು ಸಾಧ್ಯ, ಆದ್ದರಿಂದ  ಹೆಚ್-1 ಬಿ ವೀಸಾ ಕುರಿತು ಹೊಸ ಕಾರ್ಯಕಾರಿ ಆದೇಶ ಹೊರಡಿಸುವ ಯೋಜನೆ ಟ್ರಂಪ್ ಸರ್ಕಾರಕ್ಕೆ ಇರುವ ಸಾಧ್ಯತೆಗಳು ಕಡಿಮೆ ಎಂದು ಶಾಲಭ್ ಕುಮಾರ್ ಹೇಳಿದ್ದಾರೆ. 
ಕಾನೂನು ಬದ್ಧ ಶಾಶ್ವತ ನಾಗರಿಕರು ಗ್ರೀನ್ ಕಾರ್ಡ್ ಗಳನ್ನು ಪಡೆಯುವುದಕ್ಕೆ ಒಂದು ರಾಷ್ಟ್ರಕ್ಕೆ ಇಂತಿಷ್ಟೇ ಗೀನ್ ಕಾರ್ಡ್ ಗಳನ್ನು ನೀಡುವ ನಿಯಮಗಳನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಶ್ವೇತ ಭವನ ಕ್ರಮ ಕೈಗೊಳ್ಳಬಹುದು, ಇದರಿಂದ ಭಾರತದ ಐಟಿ ಉದ್ಯೋಗಿಗಳಿಗೆ ಸಹಾಯವಾಗಲಿದೆ ಎಂದು ಶಾಲಭ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com