

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಥಾಪನೆಯ ಆಮ್ ಆದ್ಮಿ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ. ಆಪ್ ಪಕ್ಷದ ದೇಣಿಗೆ ಸಂಬಂಧ ಆಡಿಟ್ ವರದಿಗಳನ್ನು ಪರಿಶೀಲನೆ ನಡೆಸಿದ್ದು ದೇಣಿಗೆ ದಾಖಲೆಗಳು ಸರಿಯಿಲ್ಲ ಎಂದು ಚುನಾವಣಾ ಆಯೋಗಕ್ಕೆ ಆದಾಯ ತೆರಿಗೆ ಇಲಾಖೆ ವರದಿ ನೀಡಿದೆ.
ರಾಜಕೀಯ ಪಕ್ಷಗಳ ದೇಣಿಗೆ ದಾಖಲಾತಿಗಳನ್ನು ಪರಿಶೀಲಿಸುತ್ತಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಪ್ ಪಕ್ಷ 2013-14 ಮತ್ತು 2014-15ರಲ್ಲಿ ಪಡೆದ ದೇಣಿಯಲ್ಲಿ ವಾಸ್ತವಿಕ ಭಿನ್ನತೆಗಳಿದ್ದು ಒಂದಕ್ಕೊಂದು ಹೊಲಿಕೆಯಾಗುತ್ತಿಲ್ಲ ಎಂದು ಹೇಳಿದೆ.
ಆಪ್ ಪಕ್ಷ ತೋರಿಸಿರುವ ಆಡಿಟ್ ವರದಿ ಪ್ರಕಾರ ಸರಿ ಸುಮಾರು 27 ಕೋಟಿ ರುಪಾಯಿ ದೇಣಿಗೆ ಪಡೆದಿರುವುದರಲ್ಲಿ ಭಿನ್ನತೆಗಳು ಇವೆ ಎಂದು ಚುನಾವಣಾ ಆಯೋಗಕ್ಕೆ ಆದಾಯ ತೆರಿಗೆ ಇಲಾಖೆ ಹೇಳಿದೆ.