ತಮಿಳುನಾಡು ಸರ್ಕಾರದ ಸಲಹೆಗಾರ ಸ್ಥಾನ ತೊರೆದ ಶೀಲಾ ಬಾಲಕೃಷ್ಣನ್!

ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಸರ್ಕಾರದ ಹಿರಿಯ ಸಲಹೆಗಾರರಾಗಿದ್ದ ಶೀಲಾ ಬಾಲಕೃಷ್ಣನ್ ಅವರು ಶುಕ್ರವಾರ ತಮ್ಮ ಸ್ಥಾನವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಸರ್ಕಾರದ ಹಿರಿಯ ಸಲಹೆಗಾರರಾಗಿದ್ದ ಶೀಲಾ ಬಾಲಕೃಷ್ಣನ್ ಅವರು ಶುಕ್ರವಾರ ತಮ್ಮ ಸ್ಥಾನವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರು 2014ರ ಮಾರ್ಚ್ ತಿಂಗಳಲ್ಲಿ ನೇಮಕವಾಗಿದ್ದ ಶೀಲಾ ಬಾಲಕೃಷ್ಣನ್ ಅವರು ಜಯ ಅವರ ಮರಣಾನಂತರ ತಮ್ಮ ಸ್ಥಾನವನ್ನು ತೊರೆದಿದ್ದಾರೆ. ಅನಾರೋಗ್ಯಕ್ಕೀಡಾಗಿ ಜಯಲಲಿತಾ  ಅವರು ಆಸ್ಪತ್ರೆಗೆ ಸೇರಿದ್ದ ಸುಮಾರು 75 ದಿನಗಳ ಕಾಲ ತಮಿಳುನಾಡು ಸರ್ಕಾರದ ಕಾರ್ಯ ಚಟುವಟಿಗೆ ಸುಗಮವಾಗಿ ನಡೆಯುವಲ್ಲಿ ಇದೇ ಶೀಲಾ ಬಾಲಕೃಷ್ಣನ್ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು. ಇದೇ ಮಾರ್ಚ್ 31ರವರೆಗೂ ಶೀಲಾ ಅವರ ಅಧಿಕಾರವಧಿ ಇದ್ದು. ಅಷ್ಟರೊಳಗೇ ಅವರು ಸ್ಥಾನ ತೊರೆಯಲು ಕಾರಣವೇನು ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿದೆ.

ಇನ್ನು ಮತ್ತೊಂದು ಬೆಳವಣಿಗೆಯಲ್ಲಿ ತಮಿಳುನಾಡು ಸರ್ಕಾರದ ಕಚೇರಿಯಲ್ಲಿ ಮೊದಲ ಮತ್ತು ನಾಲ್ಕನೇ ಕಾರ್ಯದರ್ಶಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಯಾ ಆವರ ಆಪ್ತ ಅಧಿಕಾರಿಗಳಿಂದೇ ಗುರುತಿಸಿಕೊಂಡಿದ್ದ ಕೆಎನ್  ವೆಂಕಟರಮಣನ್, ಎ ರಾಮಲಿಂಗಮ್  ಅವರಿಗೂ ಗೇಟ್ ಪಾಸ್ ನೀಡಲಾಗಿದೆ. ಕೆಎನ್ ವೆಂಕಟರಮಣನ್ ನಿವೃತ್ತ ನಾಗರಿಕ ಸೇವಕರಾಗಿದ್ದು, ರಾಮಲಿಂಗಮ್ ಅವರು ಜಯಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಅಂತೆಯೇ  ಜಯಲಲಿತಾ ಅವರ ಅತ್ಯಂತ ನಂಬುಗೆಯ ಅಧಿಕಾರಿಗಳಲ್ಲಿ ರಾಮಲಿಂಗಮ್ ಕೂಡ ಒಬ್ಬರಾಗಿದ್ದರು. 2013 ಜನವರಿ 1ರಂದು ಮೂರನೇ ಬಾರಿಗೆ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ವೆಂಕಟರಾಮನ್ ಅವರು, 2014 ಮಾರ್ಚ್  31ರಂದು ನಿವೃತ್ತಿಯಾಗಿದ್ದರು. ಆದರೆ ಅವರ ಕಾರ್ಯವೈಖರಿಗೆ ಮೆಚ್ಚಿದ್ದ ಜಯಲಲಿತಾ ಅವರು ಮತ್ತೆ ಅವರನ್ನು ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿ ಅವರ ಅಧಿಕಾರಾವಧಿಯನ್ನು ಮತ್ತೆರಡು ವರ್ಷಗಳಿಗೆ ಜಯಾ ವಿಸ್ತರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com