ಮತ ಚಲಾಯಿಸದಿದ್ದರೇ ಸರ್ಕಾರವನ್ನು ಬೈಯ್ಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್

ಒಂದು ವೇಳೆ ನೀವು ಮತ ಚಲಾಯಿಸದಿದ್ದರೇ ನಿಮಗೆ ಸರ್ಕಾರವನ್ನು ಬೈಯ್ಯುವ ಹಕ್ಕಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದಹೆಲಿ: ಒಂದು ವೇಳೆ ನೀವು ಮತ ಚಲಾಯಿಸದಿದ್ದರೇ ನಿಮಗೆ ಸರ್ಕಾರವನ್ನು ಬೈಯ್ಯುವ ಹಕ್ಕಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ದೇಶದಲ್ಲಿ ಆಗಿರುವ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸುವಂತೆ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಎಲ್ಲಾ ರಾಜ್ಯಗಳಲ್ಲಿರುವ ಒತ್ತುವರಿಯನ್ನು ತೆರವುಗೊಳಿಸುವಂತೆ ಒಟ್ಟಾಗಿ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೆಹರ್, ಎನ್ ವಿ ರಾಮಣ್ಣ ಮತ್ತು ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ,  ವ್ಯಕ್ತಿಯೊಬ್ಬ ನಡೆಯುವ ಎಲ್ಲಾ ಘಟನೆಗಳಿಗೂ ಸರ್ಕಾರವನ್ನು ಬೈಯ್ಯಲು ಸಾಧ್ಯವಿಲ್ಲ, ಒಂದು ವೇಳೆ ಮತ ಚಲಾಯಿಸದಿದ್ದರೇ ಸರ್ಕಾರವನ್ನು ನಿಂದಿಸುವ ಹಕ್ಕು ಇರುವುದಿಲ್ಲ ಎಂದು ಪೀಠ ತಿಳಿಸಿದೆ,

ದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಆಗಿರುವ ಒತ್ತುವರಿ ಸಂಬಂಧ  ಆಯಾಯಾ ರಾಜ್ಯಗಳ ಹೈಕೋರ್ಟ್ ನಲ್ಲೇ ಪ್ರಕರಣಗಳ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ದೆಹಲಿ ಮೂಲದ ವಾಯ್ಸ್ ಆಫ್ ಇಂಡಿಯಾ ಎಂಬ ಎನ್ ಜಿ ಸದಸ್ಯ ಧಾನೇಶ್ ಲೇಶ್ದಾನ್ ಎಂಬಾತ, ದೇಶಾದ್ಯಂತ ಮಾಡಿರುವ ಒತ್ತುವರಿ ತೆರವುಗೊಳಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ , ಹೀಗಾಗಿ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಲು ಕೋರ್ಟ್ ಆದೇಶ ನೀಡಬೇಕು ಎಂದು ಸುಪ್ರೀಕೋರ್ಟ್ ಮೊರೆ ಹೋಗಿದ್ದರು.

ಈ ವೇಳೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ನೀವು ಮತ ಹಾಕಿದ್ದೀರಾ ಎಂದು ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಅರ್ಜಿದಾರ ತನ್ನ ಜೀವಮಾನದಲ್ಲಿ ಒಂದು ಬಾರಿಯೂ ಮತ ಚಲಾವಣೆ ಮಾಡಿಲ್ಲ ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com