ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಕರ್ನಾಟಕ ಮುಂದು

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿ ನಾಲ್ಕು ಏತ ನೀರಾವರಿ ಯೋಜನೆ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದು ತೆಲಂಗಾಣ ಮತ್ತು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಿಜಯವಾಡ/ ಹೈದರಾಬಾದ್: ಆಲಮಟ್ಟಿ ಜಲಾಶಯದ ಎಚ್ಚರ ಹೆಚ್ಚಿಸಿ ನಾಲ್ಕು ಏತ ನೀರಾವರಿ ಯೋಜನೆ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದು ತೆಲಂಗಾಣ ಮತ್ತು ಆಂದ್ರ ಪ್ರದೇಶ ಸರ್ಕಾರಗಳಿಗೆ ಎಚ್ಚರಿಕೆ ಕರೆಗಂಟೆ ನೀಡಿದಂತಾಗಿದೆ. ರಾಜ್ಯದ ಈ ಯೋಜನೆ ವಿರುದ್ಧವಾಗಿ ಆಂದ್ರ ಮತ್ತು ತೆಲಂಗಾಣ ಸರ್ಕಾರಗಳು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಮೆಟ್ಟಲೇರುವ ಸಾಧ್ಯತೆಗಳಿವೆ.

ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಇಂದ 524.256 ಅಡಿಗಳಿಗೆ ಹೆಚ್ಚಿಸಿ, 3ನೇ ಹಂತದ ಕೃಷ್ಣ ಮೇಲ್ದಂಡೆ ಯೋಜನೆಯಡಿ 4 ಏತ ನೀರಾವರಿ ಯೋಜನೆ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದ ನದಿ ತೀರದ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣಗಳು ಕಡಿಮೆ ಪ್ರಮಾಣದ ನೀರು ಪಡೆಯಲಿವೆ.

ಇದರಿಂದಾಗಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರೈತರ ಜೀವನಾಡಿಯಾಗಿರುವ ಕೃಷ್ಣಾ ನದಿ ನೀರಿನ ಒಳಹರಿವಿನ ಪ್ರಮಾಣ ಕಡಿಮೆಯಾಗಲಿದೆ. ಜೊತೆಗೆ ಹಲವು ಜಿಲ್ಲೆಗಳ ಜನರ ದಾಹ ತಣಿಸುತ್ತಿದ್ದ ಕೃಷ್ಣಾ ನದಿಯ ಬಗ್ಗೆ ರಾಜ್ಯ ಸರ್ಕಾರ ಚಿಂತಿತವಾಗಿದೆ.

ಆಲಮಟ್ಟಿ ನದಿ ನೀರು ವಿವಾದದ ಪ್ರಕರಣ ಇನ್ನೂ ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥವಾಗಿಲ್ಲ,  ಹಂತದಲ್ಲಿ ಕರ್ನಾಟಕ ಸರ್ಕಾರ ಜಲಾಶಯದ ಎತ್ತರ ಏರಿಸಿ ನಾಲ್ಕುಏತ ನೀರಾವರಿ ಯೋಜನೆ ನಿರ್ಮಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದು ಆಂಧ್ರ ಪ್ರದೇಶ ಜಲ ಸಂಪನ್ಮೂಲ ಸಚಿವ  ದೇವಿನೇನಿ ಉಮಾ ಮಹೇಶ್ವರ ರಾವ್ ಹೇಳಿದ್ದಾರೆ.

ಕಳೆದ ವರ್ಷ ಏನಾಯಿತು ಎಂಬುದು ನಮಗೆ ತಿಳಿದಿದೆ. ಅಪ್ಪರ್ ಕ್ಯಾಚ್ ಮೆಂಟ್ ಪ್ರದೇಶಗಳಲ್ಲಿ ಮಳೆಯಿಲ್ಲದ ಕಾರಣ ಕೃಷ್ಣಾ ನದಿ ಒಳಹರಿವು ಇರಲಿಲ್ಲ, ಈಗ ಜಲಾಶಯದ ಎತ್ತರ ಹೆಚ್ಚಿಸಿ, ಏತ ನೀರಾವರಿ ಯೋಚನೆ ನಿರ್ಮಿಸಿದರೇ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳು ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ನೀರಾವರಿ ತಜ್ಞರಾದ ನಾಗಿರೆಡ್ಡಿ ಮತ್ತು ವೈ ನಾಗೇಂದ್ರ ನಾಥ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com