ವಿದ್ಯಾಸಾಗರ ರಾವ್ ಮಹಾರಾಷ್ಟ್ರಕ್ಕೆ ಅಷ್ಟೇ ಅಲ್ಲ ತಮಿಳುನಾಡಿಗೂ ರಾಜ್ಯಪಾಲರೇ: ಸ್ವಾಮಿ

ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಅವರು ಮಹಾರಾಷ್ಟ್ರಕ್ಕೆ ಮಾತ್ರವಲ್ಲ ತಮಿಳುನಾಡಿಗೂ ರಾಜ್ಯಪಾಲರು ಎಂಬುದನ್ನು ಮರೆಯಬಾರುದು ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತಮಿಳುನಾಡು ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತಮ್ಮ ವಾಗ್ದಾಳಿಯನ್ನು  ಮುಂದುವರೆಸಿದ್ದು, ಅವರು ಮಹಾರಾಷ್ಟ್ರಕ್ಕೆ ಮಾತ್ರವಲ್ಲ ತಮಿಳುನಾಡಿಗೂ ರಾಜ್ಯಪಾಲರು ಎಂಬುದನ್ನು ಮರೆಯಬಾರುದು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ ಅವರು, ವಿದ್ಯಾಸಾಗರ ರಾವ್ ಅವರು ಮಹಾರಾಷ್ಟ್ರ ರಾಜ್ಯಕ್ಕೆ ರಾಜ್ಯಪಾಲರಾಗಿರಬಹುದು. ಅಂತೆಯೇ ಅವರು ತಮಿಳುನಾಡಿನ ಹಂಗಾಮಿ  ರಾಜ್ಯಪಾಲರೆಂಬುದನ್ನು ಮರೆಯಬಾರದು. ಪ್ರಸ್ತುತ ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಅವರು ರಾಜ್ಯದಲ್ಲೇ ಇದ್ದು ಪ್ರಸ್ತುತ ತಲೆದೋರಿರುವ ಸಮಸ್ಯೆ ಬಗೆಹರಿಸಲು ಯತ್ನಿಸಬೇಕು ಎಂದು ಹೇಳಿದ್ದಾರೆ. ಇದೇ  ವೇಳೆ ವಿದ್ಯಾಸಾಗರ ರಾವ್ ಅವರ ನಡೆಯನ್ನು ಟೀಕಿಸಿದ ಸ್ವಾಮಿ, ರಾವ್ ಅವರು ಅತ್ತ ತಮಿಳುನಾಡಿನಲ್ಲಿ ಬಿಕ್ಕಟ್ಟು ಎದುರಾಗುತ್ತಿದ್ದಂತೆಯೇ ದೆಹಲಿ ಓಡಿ ಬರುತ್ತಾರೆ. ಬಳಿಕ ಮುಂಬೈ ತೆರಳುತ್ತಾರೆ. ಅವರು ಮಹಾರಾಷ್ಟ್ರದ  ರಾಜ್ಯಪಾಲರಾಗಿರಬಹುದು. ಆದರೆ ಅವರು ತಮಿಳುನಾಡಿಗೂ ರಾಜ್ಯಪಾಲರೇ ಎಂಬುದನ್ನು ಮರೆಯಬಾರದು. ರಾಜ್ಯಪಾಲರ ನಡೆ ಸಹನೀಯವಲ್ಲ. ಕಾಂಗ್ರೆಸ್ ಪಕ್ಷ ಕೂಡ ಅವರ ವಿರುದ್ಧ ಯಾವುದೇ ಮಾತುಗಳನ್ನಾಡುತ್ತಿಲ್ಲ. ಬಹುಶಃ   ವಿದ್ಯಾಸಾಗರ ರಾವ್ ಅವರು ಕಾಂಗ್ರೆಸ್ ಪಕ್ಷದಿಂದ ಪ್ರಭಾವಿತರಾಗಿರಬಹುದು ಎಂದು ಸ್ವಾಮಿ ಕಿಡಿಕಾರಿದ್ದಾರೆ.

ಇಂದು ಮಧ್ಯಾಹ್ನ ತಮಿಳುನಾಡಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್
ಇನ್ನು ತಮಿಳುನಾಡು ರಾಜ್ಯ ರಾಜಕೀಯ ಬಿಕ್ಕಟ್ಟಿನ ಹೊರತಾಗಿಯೂ ರಾಜ್ಯ ತೊರೆದಿದ್ದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರ ನಡೆ ವ್ಯಾಪಕ ಟೀಕೆಗೆ ಗುರಿಯಾಗಿರುವಂತೆಯೇ ಇಂದು ಮಧ್ಯಾಹ್ನ ಸುಮಾರು ಗಂಟೆ ಹೊತ್ತಿಗೆ  ರಾಜ್ಯಪಾಲು ತಮಿಳುನಾಡಿಗೆ ವಾಪಸ್ ಆಗುವ ಸಾಧ್ಯತೆಗಳಿವೆ. ಪ್ರಸ್ತುತ ಮುಂಬೈನಲ್ಲಿರುವ ವಿದ್ಯಾಸಾಗರ ರಾವ್ ಅವರು ನೇರವಾಗಿ ಚೆನ್ನೈಗ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com