ಗೂಡಿನಲ್ಲಿ ಬಂಧಿಸಿಡಲು ನಾವು ಹಕ್ಕಿಗಳಲ್ಲ, ನಮ್ಮನ್ನು ಒತ್ತೆಯಾಳಾಗಿ ಇಟ್ಟಿಲ್ಲ: ಎಐಎಡಿಎಂಕೆ ಶಾಸಕರು

ತಮಿಳುನಾಡಿನ ರಾಜಕೀಯದ ಅಧಿಕಾರದ ಕಿತ್ತಾಟದಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ...
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ
Updated on: 
ಚೆನ್ನೈ: ತಮಿಳುನಾಡಿನ ರಾಜಕೀಯದ ಅಧಿಕಾರದ ಕಿತ್ತಾಟದಲ್ಲಿ ತಮ್ಮ  ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ಬೆಂಬಲ ನೀಡಿದ ಎಐಎಡಿಎಂಕೆ ಶಾಸಕರು, ತಮ್ಮನ್ನು ಒತ್ತೆಯಾಳನ್ನಾಗಿ ಇಟ್ಟಿಲ್ಲ ಎಂದು ಹೇಳಿದ್ದಾರೆ.
ಮದ್ರಾಸ್ ಹೈಕೋರ್ಟ್ ನಲ್ಲಿ ಅನೇಕ ಹೇಬಿಯಸ್ ಕಾರ್ಪಸ್ ಅರ್ಜಿಗಳು ಸಲ್ಲಿಕೆಯಾಗಿದ್ದು ಮತ್ತು ಶಾಸಕರ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವವಾಗಿರುವುದರ ಮಧ್ಯೆ ತಾವು ಉಳಿದುಕೊಂಡಿರುವ ರೆಸಾರ್ಟ್ ಹೊರಗೆ ಶಾಸಕರು ಇಂದು ಮಾಧ್ಯಮದವರನ್ನು ಭೇಟಿ ಮಾಡಿದರು.
''ಶಾಸಕರನ್ನು ಒತ್ತೆಯಾಳುಗಳನ್ನಾಗಿ ಇರಿಸಲು ಸಾಧ್ಯವಿಲ್ಲ. ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರು ನಮ್ಮನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ಹಾಗೆಯೇ ಶಶಿಕಲಾ ಕೂಡ ನಮ್ಮನ್ನು ಕಾಣುತ್ತಾರೆ.'' ಎನ್ನುತ್ತಾರೆ ಶಾಸಕ ಮುರುಗುಮಾರನ್.
ಗೂಡಿನಲ್ಲಿ ಕೂಡಿಹಾಕಲು ನಾವು ಹಕ್ಕಿಗಳಲ್ಲ ಎಂದು ಮತ್ತೊಬ್ಬ ಶಾಸಕರು ಹೇಳುತ್ತಾರೆ.
ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ವಿರುದ್ಧ ತಿರುಗಿಬಿದ್ದು ಶಶಿಕಲಾ ಅವರಿಗೆ ಬೆಂಬಲ ನೀಡಲು ತಮ್ಮನ್ನು ಒತ್ತೆಯಾಳುಗಳನ್ನಾಗಿ ಇರಿಸಲಾಗಿದೆ ಎಂದು ಡಿಎಂಕೆ ಪಕ್ಷದವರು ಸುಳ್ಳು ವದಂತಿ ಹಬ್ಬಿಸುತ್ತಾರೆ ಎಂದು ಆರೋಪಿಸಿದರು.
ಈ ಮಧ್ಯೆ, ಎಐಎಡಿಎಂಕೆ ವಕ್ತಾರ ಸಿಆರ್ ಸರಸ್ವತಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ತಮಗೆ ಅನೇಕ ಬೆದರಿಕೆ ಕರೆಗಳು ಬರುತ್ತಿದ್ದು ಮೊಬೈಲ್ ನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದೇನೆ. ಚಿನ್ನಮ್ಮ ತಮಿಳುನಾಡಿನ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಂದ  ಸಿಹಿಸುದ್ದಿ ಬರಲು ಕಾಯುತ್ತಿದ್ದೇವೆಯಷ್ಟೆ ಎಂದು ಹೇಳಿದ್ದಾರೆ.
ಮದ್ರಾಸ್ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಬಗ್ಗೆ ನಿನ್ನೆ ಉತ್ತರ ನೀಡಿದ್ದ ತಮಿಳುನಾಡು ಸರ್ಕಾರದ ಪರ ವಕೀಲ, ಶಾಸಕರು ಮುಕ್ತರಾಗಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com