ಯುಎನ್ಎಸ್ ಸಿಯ ಸದಸ್ಯ ರಾಷ್ಟ್ರಗಳು ನಿಯಮ ಪಾಲಿಸಬೇಕು: ಮಸೂದ್ ಅಜರ್ ವಿಷಯದಲ್ಲಿ ಚೀನಾ

ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಪ್ರಕ್ರಿಯೆಗೆ ತಡೆಯೊಡ್ಡಿದ್ದನ್ನು ಪ್ರತಿಭಟಿಸಿದ ಭಾರತದ ನಡೆಗೆ ಚೀನಾ ಪ್ರತಿಕ್ರಿಯೆ ನೀಡಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಾಷ್ಟ್ರಗಳು ನಿಯಮಗಳನ್ನು ಪಾಲಿಸಬೇಕೆಂದು ಹೇಳಿದೆ.
ಚೀನಾ- ಮಸೂದ್ ಅಜರ್
ಚೀನಾ- ಮಸೂದ್ ಅಜರ್
ಬೀಜಿಂಗ್: ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಪ್ರಕ್ರಿಯೆಗೆ ತಡೆಯೊಡ್ಡಿದ್ದನ್ನು ಪ್ರತಿಭಟಿಸಿದ ಭಾರತದ ನಡೆಗೆ ಚೀನಾ ಪ್ರತಿಕ್ರಿಯೆ ನೀಡಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಾಷ್ಟ್ರಗಳು ನಿಯಮಗಳನ್ನು ಪಾಲಿಸಬೇಕೆಂದು ಹೇಳಿದೆ. 
ಭಾರತದ ಪ್ರತಿರೋಧಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ, ಚೀನಾ ಯುಎನ್ಎಸ್ ಸಿಯ ಜವಾಬ್ದಾರಿಯುತ ರಾಷ್ಟ್ರವಾಗಿದೆ. ಚೀನಾ ಎಂದಿಗೂ ಯುಎನ್ಎಸ್ ಸಿ ನಿರ್ಣಯಗಳನ್ನು ಹಾಗೂ ನಿಯಮಗಳನ್ನು ಪಾಲಿಸುತ್ತಿರುವ ರಾಷ್ಟ್ರವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಹಾಗೂ ಯುಎನ್ಎಸ್ ಸಿ ಗೆ ಸಂಬಂಧಿಸಿದ ಅಂಗ ಸಂಸ್ಥೆಗಳು ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದೆ. 
ಭಾರತ ಪ್ರತಿರೋಧ ವ್ಯಕ್ತಪಡಿಸಿರುವ ವರದಿಗಳನ್ನು ಪರಿಶೀಲಿಸುತ್ತೇವೆ, ಆದರೆ ಯುಎನ್ಎಸ್ ಸಿ ನಿಯಮಗಳನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಪಾಲಿಸಬೇಕು ಎಂದು ಚೀನಾದ ವಿದೇಶಾಂಗ ವಕ್ತಾರ ಲೂ ಕಾಂಗ್ ಹೇಳಿದ್ದಾರೆ. 
ಪಾಕಿಸ್ತಾನದ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಗೆ ವಿಶ್ವಸಂಸ್ಥೆ ನಿಷೇಧ ವಿಧಿಸುವ ಭಾರತ, ಅಮೆರಿಕಾದ ಪ್ರಸ್ತಾವನೆಗೆ ಚೀನಾ ತಡೆಯೊಡ್ಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com