ನಿರ್ಧಾರ ಕೈಗೊಳ್ಳಲು ರಾಜ್ಯಪಾಲರ ಬಳಿ ಕಡಿಮೆ ಕಾಲಾವಕಾಶವಿದೆ: ಸೋಲಿ ಸೊರಾಬ್ಜಿ

ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಕುರಿತು ನಿರ್ಧಾರ ಕೈಗೊಳ್ಳಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರ ಬಳಿ ಕಡಿಮೆ ಸಮಯವಿದೆ ಎಂದು ಹಿರಿಯ ವಕೀಲ ಸೋಲಿ ಸೊರಾಬ್ಜಿಯವರು ಸೋಮವಾರ ಹೇಳಿದ್ದಾರೆ...
ರಾಜ್ಯಪಾಲ ವಿದ್ಯಾಸಾಗರ್ ರಾವ್
ರಾಜ್ಯಪಾಲ ವಿದ್ಯಾಸಾಗರ್ ರಾವ್

ನವದೆಹಲಿ: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಕುರಿತು ನಿರ್ಧಾರ ಕೈಗೊಳ್ಳಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರ ಬಳಿ ಕಡಿಮೆ ಸಮಯವಿದೆ ಎಂದು ಹಿರಿಯ ವಕೀಲ ಸೋಲಿ ಸೊರಾಬ್ಜಿಯವರು ಸೋಮವಾರ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಅತಂತ್ರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸುಪ್ರೀಂಕೋರ್ಟ್ ಆದೇಶಕ್ಕಾಗಿ ರಾಜ್ಯಪಾಲರು ಕಾದುಕುಳಿತಿದ್ದಾರೆ. ಆದರೆ, ಸರ್ಕಾರ ರಚನೆ ಕುರಿತಂತೆ ಶೀಘ್ರಗತಿಯಲ್ಲಿ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕಿದ್ದು, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಡ ಮಾಡಬಾರದು ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ರಾಜ್ಯಪಾಲರು ಸಂಪುಟದ ಸಲಹೆ ಮೇರೆಗೆ ಕ್ರಮಕೈಗೊಳ್ಳಬೇಕಾಗುತ್ತದೆ. ಆದರೆ, ಈ ವಿಚಾರದಲ್ಲಿ ತದ್ವಿರುದ್ಧವಾಗಿದೆ. ಪ್ರಸ್ತುತ ಶಶಿಕಲಾ ಅವರ ವಿರುದ್ಧ ಇರುವ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇಂತಹ ಸಮಯದಲ್ಲಿ ಆದೇಶಕ್ಕಾಗಿ ಕಾಯುವುದು ಸರಿಯಲ್ಲ. ಅಧಿಕಾರಕ್ಕೆ ಏರುವುದಕ್ಕೂ ಮುನ್ನ ಆದೇಶ ಬರಬೇಕೆಂಬುದು ನನ್ನ ಆಶಯವೂ ಕೂಡ ಆಗಿದೆ ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ವಿಚಾರ ಸಂಬಂಧ ರಾಜ್ಯಪಾಲರು ಈ ಹಿಂದೆ ಸೊರಾಬ್ಜಿಯವರ ಬಳಿ ಕಾನೂನು ಸಲಹೆಗಳನ್ನು ತೆಗೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಗುರುವಾರದೊಳಗಾಗಿ ಆದೇಶ ಬರುವ ಸಾಧ್ಯತೆಗಳಿವೆ ಎಂದು ಸಲಹೆ ನೀಡಿದ್ದು ಎಂದು ತಿಳಿದುಬಂದಿದೆ.

 ಸೊರಾಬ್ಜಿಯವರು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲು ಯಾವುದೇ ನಿಂಬಧನೆಗಳಿಲ್ಲ. ರಾಜ್ಯಪಾಲರು ವರದಿ ಸಲ್ಲಿಸಿದ ಬಳಿಕ ರಾಷ್ಟ್ರಪತಿ ಆಡಳಿತವನ್ನೂ ಜಾರಿಗೆ ತರಬಹುದು. ಈ ಪ್ರಕರಣವನ್ನು ನೋಡಿದರೆ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದು ಸರಿಯಲ್ಲ ಎಂದು ಅನಿಸುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com