ಅಕ್ರಮ ಆಸ್ತಿಗಳಿಕೆ: ಸುಪ್ರೀಂ ತೀರ್ಪಿಗೆ ಶಶಿಕಲಾ ಪುಷ್ಪ ಸಂತಸ

ಆದಾಯಕ್ಕೂ ಹೆಚ್ಚು ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಚ್ಛಾಟಿತ ಎಐಎಡಿಎಕೆ ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪ ಅವರು ಮಂಗಳವಾರ...
ಉಚ್ಛಾಟಿತ ಎಐಎಡಿಎಕೆ ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪ
ಉಚ್ಛಾಟಿತ ಎಐಎಡಿಎಕೆ ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪ

ಚೆನ್ನೈ: ಆದಾಯಕ್ಕೂ ಹೆಚ್ಚು ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಚ್ಛಾಟಿತ ಎಐಎಡಿಎಕೆ ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪ ಅವರು ಮಂಗಳವಾರ ಸ್ವಾಗತಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಭಾರತದ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆಯಿದೆ. ಶಶಿಕಲಾ ಅವರ ವಿರುದ್ಧ ತೀರ್ಪು ಬಂದಿರುವುದು ಸಂತಸ ತಂದಿದೆ. 'ಕ್ರಿಮಿನಲ್' ಶಶಿಕಲಾ ಅಡಿಯಲ್ಲಿ ತಮಿಳುನಾಡು ರಾಜ್ಯ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಪ್ರತೀಯೊಬ್ಬರೂ ಅಮ್ಮ (ಜಯಲಲಿತಾ)ರನ್ನು ಪ್ರೀತಿಸುತ್ತಿದ್ದರು. ಹೀಗಾಗಿಯೇ ಇಡೀ ರಾಜ್ಯ ಜಯಲಲಿತಾ ಅವರ ಅಡಿಯಲ್ಲಿ ಅಭಿವೃದ್ಧಿಗೊಳ್ಳುತ್ತಿತ್ತು. ಶಶಿಕಲಾರಂತಹ ಕ್ರಿಮಿನಲ್ ಗಳ ಅಡಿಯಲ್ಲಿ ರಾಜ್ಯ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಶಶಿಕಲಾ ಮೇಲೆ ಯಾರೊಬ್ಬರಿಗೂ ಸಹಾನುಭೂತಿಯಿಲ್ಲ. ಶಶಿಕಲಾ ಓರ್ವ ಕ್ರಿಮಿನಲ್. ರಾಜ್ಯದಲ್ಲಿ ಆಕೆಗೆ ಬಹಳ ಕೆಟ್ಟ ಹೆಸರಿದೆ. ಯಾರ ಮೇಲೆ ಬೇಕಾದರೂ ಸುಳ್ಳು ದಾಖಲೆಗಳನ್ನು ಆಕೆ ಒದಗಿಸಬಲ್ಲಳು. ಅಮ್ಮ ವಿರುದ್ಧವೇ ಷಡ್ಯಂತ್ರ ರೂಪಿಸಿದ್ದವಳು ಶಶಿಕಲಾ.

ಅಮ್ಮನ ಅಡಿಯಲ್ಲಿ ನಾನು ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ. ನಾನು ಶಶಿಕಲಾ ವಿರುದ್ಧ ಹೋರಾಡಿದ್ದಕ್ಕೆ ನನ್ನನ್ನು ಕೆಟ್ಟವಳನ್ನಾಗಿ ಮಾಡಿದ್ದಾಳೆ. ಶಶಿಕಲಾ ವಿರುದ್ಧ ತೀರ್ಪು ಬಂದಿರುವುದಕ್ಕೆ ಬಹಳ ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಪನ್ನೀರ್ ಸೆಲ್ವಂ ಅವರ ಕುರಿತಂತೆ ಮಾತನಾಡಿರುವ ಅವರು, ಶಶಿಕಲಾ ಅವರು ಇನ್ನು ಮುಂದಿನ 10 ವರ್ಷಗಳವರೆಗೆ ರಾಜಕೀಯ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆಕೆ ಮುಖ್ಯಮಂತ್ರಿಯಾಗುವುದು ಸಾಧ್ಯವೇ ಇಲ್ಲ. ಆಕೆಯನ್ನು ಇನ್ನು ಯಾರೂ ಇಷ್ಟಪಡುವುದಿಲ್ಲ. ಪನ್ನೀರ್ ಸೆಲ್ವಂ ಅವರೇ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆಂಬ ನಂಬಿಕೆ ಇದೆ. ವ್ಯವಸ್ಥೆ ಮೇಲೆ ನನಗೆ ನಂಬಿಕೆಯಿದೆ. ತಮಿಳುನಾಡಿನಲ್ಲಿ ಗೂಂಡಾ, ರೌಡಿಗಳ ವರ್ತನೆಗೆ ಕಡಿವಾಣ ಬೀಳಲಿದೆ. ಶಶಲಿಕಾ ನನ್ನ ವಿರುದ್ದ 3-4 ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ತಮಿಳುನಾಡಿನಲ್ಲಿ ಕುಟುಂಬ ರಾಜಕೀಯ ಅಂತ್ಯಗೊಂಡಿದೆ ಎಂದು ಹೇಳಿದ್ದಾರೆ.

ಜಯಲಲಿತಾ ಅವರ ನಿಧನದ ಬಳಿಕ ಎಐಎಡಿಎಂಕೆ ಪಕ್ಷದಲ್ಲಿ ಹಿಡಿತ ಸಾಧಿಸಲು ವಿ.ಕೆ. ಶಶಿಕಲಾ ಅವರು ಯತ್ನ ನಡೆಸಲು ಮುಂದಾಗಿದ್ದಾಗಿನಿಂದಲೂ ಶಶಿಕಲಾ ಪುಷ್ಪ ಅವರು ವಿ.ಕೆ. ಶಶಿಕಲಾಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು.

ಶಶಿಕಲಾಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದಾಗಲೂ ಶಶಿಕಲಾ ಪುಷ್ಪ ಅವರು ವಿ.ಕೆ. ಶಶಿಕಲಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಶಶಿಕಲಾ ನಟರಾಜನ್ ಅವರು ಜೆ.ಜಯಾಲಲಿತಾ ಅವರನ್ನು ಹತ್ಯೆ ಮಾಡಲು ಯತ್ನ ನಡೆಸಿದ್ದು, ಅವರ ವಿರುದ್ಧ ಸಾಕಷ್ಟು ಪಿತೂರಿ ನಡೆಸಿದ್ದರು. ಇಂತಹವರನ್ನೇ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದು ಸರಿಯಲ್ಲ. ಜಯಾಲಲಿತಾ ಅವರು ಎಲ್ಲಿಯೂ ಶಶಿಕಲಾ ಅವರ ಹೆಸರನ್ನು ಹೇಳಿರಲಿಲ್ಲ. ಅಮ್ಮ ಶಶಿಕಲಾ ಅವರಿಗೆ ಕನಿಷ್ಠ ಪಕ್ಷ ಶಾಸಕ ಸ್ಥಾನವನ್ನೂ ನೀಡಿರಲಿಲ್ಲ. ತಮ್ಮನ್ನು ಹತ್ಯೆ ಮಾಡಲು ಸಂಚೂ ರೂಪಿಸಿದ್ದ ಕಾರಣಕ್ಕೆ ಹಾಗೂ ತಮ್ಮ ವಿರುದ್ಧ ಪಿತೂರಿ ನಡೆದಿದ್ದರೆಂದು ಸ್ವತಃ ಜಯಾಲಲಿತಾ ಅವರೇ ಶಶಿಕಲಾ ಅವರನ್ನು ಪಕ್ಷದಿಂದ ಹೊರಗೆ ಹಾಕಿದ್ದರು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com