ಮುಂಬೈ: ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರದಿಂದ ಹೊರಬಂದರೆ ಬಿಜೆಪಿಗೆ ಎನ್ ಸಿಪಿ ಬೆಂಬಲ ನೀಡುವುದಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರತ್ ಪವಾರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಮುಂಬೈನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್ ಅವರು, ಒಂದು ವೇಳೆ ಶಿವಸೇನೆ ದೇವೇಂದ್ರ ಫಡ್ನವಿಸ್ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವ ನಿರ್ಧಾರ ತೆಗೆದುಕೊಂಡರೆ ನಾವು ಬೆಂಬಲ ನೀಡುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಡಲು ಸಿದ್ಧ ಎಂದಿದ್ದಾರೆ.
ಶಿವಸೇನೆ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಲ್ಲಿ ಫಡ್ನವೀಸ್ ಸರಕಾರಕ್ಕೆ ನಮ್ಮ ಬೆಂಬಲ ಇಲ್ಲವೆಂದು ನಾವು ರಾಜ್ಯಪಾಲರಿಗೆ ಪತ್ರಬರೆದು ಒಪ್ಪಿಸುತ್ತೇವೆ; ಆದರೆ ಅದಕ್ಕೆ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅವರು ಫಡ್ನವೀಸ್ ಸರಕಾರಕ್ಕೆ ತನ್ನ ಬೆಂಬಲ ಹಿಂದೆಗವ ಪತ್ರವನ್ನು ರಾಜ್ಯಪಾಲರಿಗೆ ಒಪ್ಪಿಸಬೇಕು ಎಂದು ಶರದ್ ಪವಾರ್ ಅವರು ಸವಾಲು ಹಾಕಿದ್ದಾರೆ.