ಮಿಡ್ನಾಪುರ: ಇಬ್ಬರು ತೃಣಮೂಲಕ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಕಳೆದ ರಾತ್ರಿ ಮಿಡ್ನಾಪುರ ಜಿಲ್ಲೆಯ ಖಾರಗ್ಪುರದಲ್ಲಿ ಬಂಧಿಸಿದ್ದಾರೆ.
ತೃಣಮೂಲಕ ಕಾಂಗ್ರೆಸ್ ನ ಕೌನ್ಸಿಲರ್ ಅವರ ಕಚೇರಿ ಮೇಲೆ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದ ಆರೋಪದ ಮೇಲೆ ಸಂಜಯ್ ಪ್ರಸಾದ್ ಮತ್ತು ಕೃಷ್ಣ ರಾಮ್ ಎಂಬುವರನ್ನು ಘಾಟಲ್ ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖಾರಗ್ಪುರದ ಕೌನ್ಸಿಲರ್ ಆಗಿರುವ ಎ ಪೂಜಾ ಅವರ ಕಚೇರಿ ಮೇಲೆ ಆರೋಪಿಗಳು ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಪೂಜಾ ಪತಿ ಶ್ರೀನು ನಾಯ್ಡು ಮತ್ತು ಪಕ್ಷದ ಕಾರ್ಯಕರ್ತ ವಿ ಧರ್ಮ ಎಂಬುವರು ಮೃತಪಟ್ಟಿದ್ದರು.
ಪೊಲೀಸರ ತನಿಖೆ ವೇಳೆ ಸಂಜಯ್ ಪ್ರಸಾದ್ ಮತ್ತು ಕೃಷ್ಣ ರಾವ್ ಇಬ್ಬರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು ಇದರಲ್ಲಿ ಶ್ರೀನು ನಾಯ್ಡು ತಲೆ ಹಾಕಿದ್ದರಿಂದ ಆರೋಪಿಗಳು ಶ್ರೀನು ನಾಯ್ಡು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.