ರದ್ದುಗೊಂಡಿದ್ದ ಸಾರ್ಕ್ ಸಮ್ಮೇಳನವನ್ನು ಪುನಃ ನಡೆಸುವುದರ ಬಗ್ಗೆ ಪಾಕ್ ವಿಶ್ವಾಸ

2016 ರ ನವೆಂಬರ್ ನಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನವನ್ನು ಮತ್ತೆ ನಡೆಸುವುದರ ಬಗ್ಗೆ ಪಾಕಿಸ್ತಾನ ವಿಶ್ವಾಸ ವ್ಯಕ್ತಪಡಿಸಿದೆ.
ಪಾಕಿಸ್ತಾನ
ಪಾಕಿಸ್ತಾನ
Updated on: 
ಇಸ್ಲಾಮಾಬಾದ್: 2016 ರ ನವೆಂಬರ್ ನಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನವನ್ನು ಮತ್ತೆ ನಡೆಸುವುದರ ಬಗ್ಗೆ ಪಾಕಿಸ್ತಾನ ವಿಶ್ವಾಸ ವ್ಯಕ್ತಪಡಿಸಿದೆ. 
ಗಡಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ನಿರಂತರ ದಾಳಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿತ್ತು. ಭಾರತ ಬಹಿಷ್ಕರಿಸುತ್ತಿದ್ದಂತೆಯೇ ಬಾಂಗ್ಲಾದೇಶ, ಭೂತಾನ್, ಅಫ್ಘಾನಿಸ್ತಾನ, ಶ್ರೀಲಂಕಾ ರಾಷ್ಟ್ರಗಳೂ ಸಹ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದವು. ಪರಿಣಾಮವಾಗಿ ಪಾಕಿಸ್ತಾನದ್ಲಲಿ ನಡೆಯಬೇಕಿದ್ದ ಸಾರ್ಕ್ ರಾಷ್ಟ್ರಗಳ ಸಮ್ಮೇಳನ ರದ್ದುಗೊಂಡಿತ್ತು. ಆದರೆ ಈಗ ಪಾಕಿಸ್ತಾನ ಮತ್ತೆ ಆ ಸಮ್ಮೇಳನವನ್ನು ನಡೆಸುವ ವಿಶ್ವಾಸ ವ್ಯಕ್ತಪಡಿಸಿದೆ. 
ಪಾಕ್ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್, ಸದ್ಯದಲ್ಲೇ ಅಧಿಕಾರಾವಧಿ ಪೂರ್ಣಗೊಳಿಸಲಿರುವ ಸಾರ್ಕ್ ನ ಪ್ರಧಾನ ಕಾರ್ಯದರ್ಶಿ ಅರ್ಜುನ್ ಬಹದ್ದೂರ್ ಥಾಪ ಅವರೊಂದಿಗೆ ಚರ್ಚಿಸಿದ್ದು, ಸಾರ್ಕ್ ಸಮ್ಮೇಳನಕ್ಕೆ ಭಾರತ ಅಡ್ಡಿ ಪಡಿಸಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೇ ಪಾಕಿಸ್ತಾನ ಪ್ರಾದೇಶಿಕ ಸಹಕಾರಕ್ಕೆ ಎಂದಿಗೂ ಬದ್ಧವಾಗಿದ್ದು, ರದ್ದುಗೊಂಡಿದ್ದ ಸಮ್ಮೇಳನವನ್ನು ಪುನಃ ನಡೆಸುವುದರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com