ಇನ್ನು ಜಂಟಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸಹ ಭಾರತದ ಆರ್ಥಿಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ 10 ವರ್ಷಗಳ ಆಡಳಿತಾವಧಿಯಲ್ಲಿ ಶೇಖಡ 7 ರಷ್ಟು ಜಿಡಿಪಿ ದರವನ್ನು ನಿಭಾಯಿಸಿಕೊಂಡು ಬಂದಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ತನ್ನ ಎರಡು ವರ್ಷಗಳ ಕಾಲಾವಧಿಯಲ್ಲೇ ಜಿಡಿಪಿ ದರ ಕುಸಿದಿದೆ ಎಂದರು.