ದೇಶಿ ನಿರ್ಮಿತ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭೂಮಿಯಿಂದ-ಅಂತರಿಕ್ಷಕ್ಕೆ ಜಿಗಿಯುವ ಸಾಮರ್ಥ್ಯ ಹೊಂದಿರುವ ತ್ವರಿತ ಪ್ರತಿಕ್ರಿಯೆ ನೀಡುವ ದೇಶಿ ನಿರ್ಮಿತ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಜು.03 ರಂದು ಯಶಸ್ವಿಗೊಂಡಿದೆ.
ಕ್ಷಿಪಣಿ
ಕ್ಷಿಪಣಿ
ಬಾಲಸೋರ್: ಭೂಮಿಯಿಂದ-ಅಂತರಿಕ್ಷಕ್ಕೆ ಜಿಗಿಯುವ ಸಾಮರ್ಥ್ಯ ಹೊಂದಿರುವ ತ್ವರಿತ ಪ್ರತಿಕ್ರಿಯೆ ನೀಡುವ ದೇಶಿ ನಿರ್ಮಿತ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಜು.03 ರಂದು ಯಶಸ್ವಿಗೊಂಡಿದೆ. 
ಒಡಿಶಾದ ಬಾಲಸೋರ್ ಕಡಲ ತೀರದಿಂದ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾಯಿಸಲಾಗಿದ್ದು, ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಿಪಣಿಯನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದ್ದು, ಮೊದಲ ಹಂತದ ಪರೀಕ್ಷಾರ್ಥ ಪ್ರಯೋಗವನ್ನು ಜೂ.4 ರಂದು ನಡೆಸಲಾಗಿತ್ತು. 
25-30 ಕಿಮೀ ಸ್ಟ್ರೈಕ್ ರೇಂಜ್ ನ್ನು ಹೊಂದಿರುವ ಕ್ಷಿಪಣಿಯನ್ನು ಎಲ್ಲಾ ರೀತಿಯ ಹಾವಾಮಾನಕ್ಕೂ ಒಗ್ಗಿಕೊಳ್ಳುವ ಶಸ್ತ್ರ ವ್ಯವಸ್ಥೆ, ಟ್ರ್ಯಾಕಿಂಗ್ ಮತ್ತು ಫೈರಿಂಗ್ ವ್ಯವಸ್ಥೆಯನ್ನು ಹೊಂದಿದೆ. ಡಿಆರ್ ಡಿಒ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ಅರುಣ್ ಜೇಟ್ಲಿ ಡಿಆರ್ ಡಿಒಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com