ಮೊಬೈಲ್, ಜೀನ್ಸ್'ನಿಂದ ದೂರವಿರಿ: ಯುವತಿಯರಿಗೆ ರಾಜಸ್ತಾನ ಖಾಪ್ ಪಂಚಾಯತ್ ತಾಕೀತು

ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ನಮ್ಮ ಸಮುದಾಯದ ಘನತೆ ಹಾಗೂ ಗೌರವ ಹಾಳಾಗುತ್ತಿದ್ದು, ಈ ಹಿನ್ನಲೆಯಲ್ಲಿ ಯುವತಿಯರು ಜೀನ್ಸ್ ಮತ್ತು ಆಕರ್ಷಕ ಬಟ್ಟೆಗಳನ್ನು ತೊಡಬಾರದು, ಮೊಬೈಲ್ ಫೋನ್ ಗಳನ್ನು ಬಳಸಬಾರದು ಎಂದು ರಾಜಸ್ತಾನದ ಪಂಚಾಯತ್ ಸದಸ್ಯರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೈಪುರ: ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ನಮ್ಮ ಸಮುದಾಯದ ಘನತೆ ಹಾಗೂ ಗೌರವ ಹಾಳಾಗುತ್ತಿದ್ದು, ಈ ಹಿನ್ನಲೆಯಲ್ಲಿ ಯುವತಿಯರು ಜೀನ್ಸ್ ಮತ್ತು ಆಕರ್ಷಕ ಬಟ್ಟೆಗಳನ್ನು ತೊಡಬಾರದು, ಮೊಬೈಲ್ ಫೋನ್ ಗಳನ್ನು ಬಳಸಬಾರದು ಎಂದು ರಾಜಸ್ತಾನದ ಪಂಚಾಯತ್ ಸದಸ್ಯರು ತಾಕೀತು ಮಾಡಿದ್ದಾರೆ. 
ರಾಜಸ್ತಾನದ ಧೋಲ್ಪುರ ಜಿಲ್ಲೆಯ ಬಲ್ಡಿಯಾಪುರ ಗ್ರಾಮದ ಪಂಚಾಯತ್ ನಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. 
ಪಾಶ್ಚಿಮಾತ್ರ ಸಂಸ್ಕೃತಿಗಳು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿವೆ. ಯುವತಿಯರು ಜೀನ್ಸ್ ಹಾಗೂ ಆಕರ್ಷಕ ಬಟ್ಟೆಗಳನ್ನು ತೊಡುವುದನ್ನು ನಿಲ್ಲಿಸಿದರೆ, ಯುವತಿರಯರಿಗೆ ಲೈಂಗಿಕ ಕಿರುಕುಳ ತಪ್ಪಲಿದೆ ಎಂದು ಪಂಚಾಯತ್ ಸದಸ್ಯರು ಹೇಳಿದ್ದಾರೆ. 
ಇದಲ್ಲದೆ, ಮದ್ಯಪಾನವನ್ನು ನಿಷೇಧಿಸಿರುವ ಪಂಚಾಯತ್, ಯಾವುದೇ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಪೊಲಿಸರನ್ನು ಸಂಪರ್ಕಿಸಬಾರದು. ಯಾವುದೇ ಸಮಸ್ಯೆಯಿದ್ದರೂ ಪಂಚಾಯತ್ ಮೂಲಕವೇ ಬಗೆಹರಿಸಿಕೊಳ್ಳಲು ಯತ್ನಿಸಬೇಕು. ಒಂದು ವೇಳೆ ಪಂಚಾಯತ್ ನಲ್ಲಿ ಪರಿಹಾರ ದೊರೆಯದಿದ್ದರೆ ಮಾತ್ರ ಪೊಲೀಸ್ ಠಾಣೆ ಮೆಟ್ಟಿಲೇರಬಹುದು ಎಂದು ಸೂಚಿಸಿದೆ. 
ಯುವತಿಯರು ಜೀನ್ಸ್ ಧರಿಸುವುದರಿಂದ ಮತ್ತು ಮೊಬೈಲ್ ಫೋನ್ ಗಳನ್ನು ಬಳಕೆ ಮಾಡುವುದರಿಂದ ಭಾರತೀಯ ಸಂಸ್ಕೃತಿ ನಾಶವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿ ಹೆಚ್ಚಿನ ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಆಧುನಿಕ ಉಡುಪುಗಳನ್ನು ಧರಿಸುತ್ತಿದ್ದಾರೆ. ಹೀಗಾಗಿ ಯುವತಿಯರಿಗೆ ಜೀನ್ಸ್ ಮತ್ತು ಮೊಬೈಲ್ ಫೋನ್ ಕೊಡಿಸದಂತೆ ಪೋಷಕರಿಗೆ ಸೂಚಜಿಸಿದೆ. ಅಲ್ಲದೆ, ಹೆಣ್ಣುಮಕ್ಕಳ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇರಿಸುವಂತೆಯೂ ಸೂಚಿಸಿದೆ. 
ಪಂಚಾಯತ್ ಸದಸ್ಯರು ತೆಗೆದುಕೊಂಡಿರುವ ಈ ನಿರ್ಣಯಕ್ಕೆ ಇದೀಗ ಹಲವೆಡೆ ವಿರೋಧಗಳು ವ್ಯಕ್ತವಾಗತೊಡಗಿದ್ದು, ರಾಜಸ್ತಾನ ಮಹಿಳಾ ಆಯೋಗ ತೀವ್ರವಾಗಿ ಕಿಡಿಕಾರಿದೆ. ಅಲ್ಲದೆ, ತನಿಖೆ ನಡೆಸುವಂತೆ ಆಗ್ರಹಿಸಿದೆ. 
ಪಂಚಾಯತ್ ಸದಸ್ಯರು ತೆಗೆದುಕೊಂಡಿರುವ ಈ ನಿರ್ಣಯದ ಕುರಿತು ಗ್ರಾಮಸ್ಥರಾರು ಬಹಿರಂಗವಾಗಿ ಹೇಳಿಕೆಯನ್ನು ನೀಡುತ್ತಿಲ್ಲ. ಹೀಗಾಗಿ ಯಾವುದೇ ಆದೇಶದ ಕುರಿತು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ರಾಜಸ್ತಾನ ಮಹಿಳಾ ಆಯೋಗದ ಮುಖ್ಯಸ್ಥೆ ಸುಮನ್ ಶರ್ಮಾ ಅವರು ಹೇಳಿದ್ದಾರೆ. 
ಒತ್ತಡಗಳಿಂದಾಗಿ ಗ್ರಾಮಸ್ಥರು ಬಾಯಿಬಿಡುತ್ತಿಲ್ಲ. ಹೀಗಾಗಿ ಸ್ಥಳೀಯ ಆಡಳಿತ ಮಂಡಳಿಗೆ ಮಾಹಿತಿ ಸಂಗ್ರಹಿಸುವಂತೆ ತಿಳಿಸಲಾಗಿದೆ. ಮದ್ಯಪಾನ, ಧೂಮಪಾನ ನಿಷೇಧಿಸಿರುವ ನಿರ್ಧಾರ ಸರಿಯಿದೆ. ಆದರೆ, ಯುವತಿಯವರು ಜೀನ್ಸ್ ಧರಿಸಬಾರದು, ಮೊಬೈಲ್ ಫೋನ್ ಬಳಕೆ ಮಾಡಬಾರದೆಂಬ ಆದೇಶ ಸರಿಯಲ್ಲ ಎಂದು ಶರ್ಮಾ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com