ಹಿಂದೂ ಮಹಾಸಾಗರದಲ್ಲಿ ಸಮರಾಭ್ಯಾಸ: ಯುದ್ಧ ನೌಕೆಗಳನ್ನು ನಿಯೋಜಿಸಲಿರುವ ಭಾರತ, ಅಮೆರಿಕ ಜಪಾನ್!
ಭಾರತ-ಚೀನಾ ನಡುವೆ ಗಡಿ ವಿಷಯದಲ್ಲಿ ವಿವಾದ ಪ್ರಾರಂಭವಾಗಿದ್ದು, ಶಾಂತಿ ಬೇಕೋ, ಯುದ್ಧ ಬೇಕೋ ನಿರ್ಧರಿಸಿ ಎಂದು ಚೀನಾ ಹೇಳಿದ್ದು, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಯುದ್ಧ ನೌಕೆಗಳನ್ನು ಹೆಚ್ಚಿಸಿದೆ.
ನವದೆಹಲಿ: ಭಾರತ-ಚೀನಾ ನಡುವೆ ಗಡಿ ವಿಷಯದಲ್ಲಿ ವಿವಾದ ಪ್ರಾರಂಭವಾಗಿದ್ದು, ಶಾಂತಿ ಬೇಕೋ, ಯುದ್ಧ ಬೇಕೋ ನಿರ್ಧರಿಸಿ ಎಂದು ಚೀನಾ ಹೇಳಿದ್ದು, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಯುದ್ಧ ನೌಕೆಗಳನ್ನು ಹೆಚ್ಚಿಸಿದೆ.
ಏತನ್ಮಧ್ಯೆ ಭಾರತವೂ ಚೀನಾಗೆ ತಕ್ಕ ಪ್ರತಿಕ್ರಿಯೆ ನೀಡಿಲು ಸಜ್ಜುಗೊಂಡಿದ್ದು, ಅಮೆರಿಕಾ ಜಪಾನ್ ರಾಷ್ಟ್ರಗಳೊಂದಿಗೆ ಸೇರಿ ಹಿಂದೂ ಮಹಾಸಾಗರದಲ್ಲಿ ಬೃಹತ್ ಪ್ರಮಾಣದ ಯುದ್ಧ ನೌಕೆಗಳನ್ನು ನಿಯೋಜಿಸಲು ಸಿದ್ಧತೆ ನಡೆಸಿದೆ. ಜು.10 ರಿಂದ ಹಿಂದೂ ಮಹಾಸಾಗರದಲ್ಲಿ ಭಾರತ-ಅಮೆರಿಕಾ-ಜಪಾನ್ ಯುದ್ಧ ನೌಕೆಗಳು ನಿಯೋಜನೆಗೊಳ್ಳಲಿದೆ.
ಭಾರತದ ಐಎನ್ಎಸ್ ವಿಕ್ರಮಾದಿತ್ಯ, ಅಮೆರಿಕದ ನಿಮಿಟ್ಜ್ ವಿಮಾನವಾಹಕ ನೌಕೆ, ಜಪಾನ್ ನ ಬೃಹತ್ ಹೆಲಿಕಾಫ್ಟರ್ ವಾಹಕ ಸೇರಿದಂತೆ ಇನ್ನೂ ಹಲವು ಯುದ್ಧನೌಕೆಗಳು ಹಿಂದೂ ಮಹಾಸಾಗರದಲ್ಲಿ ನಿಯೋಜನೆಗೊಳ್ಳಲಿದ್ದು, ತಾಲೀಮು ನಡೆಸಲಿವೆ.