ಚಂದ್ರ
ಚಂದ್ರ

ಗುರುಪೂರ್ಣಿಮೆ: ಚಂದ್ರನ ಫೋಟೋ ಹಾಕಿದ್ದ ನಾಸಾ ಟ್ವೀಟ್ಗೆ ಟ್ವೀಟರಿಗರಿಂದ ಸಿಕ್ಕಾಪಟ್ಟೆ ರೀಟ್ವೀಟ್

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗುರು ಪೂರ್ಣಿಮೆ ಬಗ್ಗೆ ಉಲ್ಲೇಖಿಸಿ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಪೂರ್ಣಚಂದ್ರನ ಪೋಟೋ ಹಾಕಿದ್ದು ಇದಕ್ಕೆ ಟ್ವೀಟರಿಗರು...
ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗುರು ಪೂರ್ಣಿಮೆ ಬಗ್ಗೆ ಉಲ್ಲೇಖಿಸಿ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಪೂರ್ಣಚಂದ್ರನ ಪೋಟೋ ಹಾಕಿದ್ದು ಇದಕ್ಕೆ ಟ್ವೀಟರಿಗರು ಸಿಕ್ಕಾಪಟ್ಟೆ ರೀಟ್ವೀಟ್ ಮಾಡಿದ್ದಾರೆ.
ಜುಲೈ 7ರಂದು ನಾಸಾ ತನ್ನ ಟ್ವೀಟರ್ ಅಕೌಂಟ್ ನಲ್ಲಿ ಈ ಫೋಟೋ ಹಾಕಿ ಗುರುಪೂರ್ಣಿಮೆಗೆ ಗೌರ ನೀಡಿತ್ತು. ಇದಕ್ಕೆ ನಾಸಾದ ಈ ಟ್ವೀಟ್ ಗೆ ಐದು ಸಾವಿರಕ್ಕೂ ಹೆಚ್ಚು ರೀಟ್ವೀಟ್ ಆಗಿದೆ. 8 ಸಾವಿರಕ್ಕೂ ಹೆಚ್ಚು ಟ್ವೀಟರಿಗರು ಇದನ್ನು ಲೈಕ್ ಮಾಡಿದ್ದಾರೆ. 
ಆಷಾಢ ಮಾಸದ ಹುಣ್ಣಿಮೆ ದಿನವಾದ ಗುರುಪೂರ್ಣಿಮೆ ಹಬ್ಬವು ಭಾರತದ ಸಂಸ್ಕೃತಿಯ ಒಂದು ಭಾಗ. ನಾಸಾ ಈ ಹೆಸರನ್ನು ನೇರವಾಗಿ ಉಪಯೋಗಿಸಿರುವುದು ಭಾರತೀಯ ಸಂಸ್ಕೃತಿಗೆ ಸಿಕ್ಕ ಗೌರವ ಮತ್ತು ಮಾನ್ಯತೆ ಎನ್ನಬಹುದು. ಇನ್ನು ನಾಸಾ ಟ್ವೀಟ್ ನಲ್ಲಿ ಹೇ ಮೂನ್, ಮೀಡ್ ಮೂನ್, ರೈಪ್ ಕಾರ್ನ್ ಮೂನ್, ಬಕ್ ಮೂನ್ ಹಾಗೂ ಥಂಡರ್ ಮೂನ್ ಎಂದು ಟ್ವೀಟ್ ಮಾಡಿದೆ.

Related Stories

No stories found.

Advertisement

X
Kannada Prabha
www.kannadaprabha.com