ಬುರ್ಹಾನ್ ವಾನಿ ಹೊಗಳಿಕೆ: ಪಾಕ್ ವಿರುದ್ಧ ಭಾರತ ವಾಗ್ದಾಳಿ

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖಂಡ ಬುರ್ಹಾನ್ ವಾನಿಯನ್ನು ಪಾಕಿಸ್ತಾನ ಹೊಗಳುತ್ತಿದ್ದು, ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಇಸ್ಲಾಮಾಬಾದ್'ನ್ನು ಇಡೀ ವಿಶ್ವ ಖಂಡಿಸಬೇಕಿದೆ ಎಂದು ಭಾರತ ಭಾನುವಾರ...
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖಂಡ ಬುರ್ಹಾನ್ ವಾನಿ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖಂಡ ಬುರ್ಹಾನ್ ವಾನಿ
ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖಂಡ ಬುರ್ಹಾನ್ ವಾನಿಯನ್ನು ಪಾಕಿಸ್ತಾನ ಹೊಗಳುತ್ತಿದ್ದು, ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಇಸ್ಲಾಮಾಬಾದ್'ನ್ನು ಇಡೀ ವಿಶ್ವ ಖಂಡಿಸಬೇಕಿದೆ ಎಂದು ಭಾರತ ಭಾನುವಾರ ಹೇಳಿದೆ. 
ಪಾಕಿಸ್ತಾನದ ವಿರುದ್ಧ ಕಿಡಿಕಾರಿರುವ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಗೋಪಾಲ್ ಬಾಗ್ಲೆ ಅವರು, ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ನಿಷೇಧಿತ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕೈಪಿಡಿಗಳನ್ನು ಓದುತ್ತಿದ್ದಾರೆ. ಇದೀಗ ಪಾಕಿಸ್ತಾನದ ಸಿಒಎಎಸ್ ಗಳು ಬುರ್ಹಾನ್ ವಾನಿಯನ್ನು ಹೊಗಳುತ್ತಿದ್ದಾರೆ. ವಾನಿಯನ್ನು ಹೊಗಳುವ ಮೂಲಕ ಪಾಕಿಸ್ತಾನ ಭಯೋತ್ಪದಾನೆಯ ಪೋಷಕರ ಎಂಬುದನ್ನು ಪಾಕಿಸ್ತಾನ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ಹೇಳಿದ್ದಾರೆ. 
ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದ್ದು, ಬೆಂಬಲ ನೀಡುತ್ತಿದೆ. ಪಾಕಿಸ್ತಾನದ ಈ ವರ್ತನೆಯನ್ನು ಇಡೀ ವಿಶ್ವ ಖಂಡಿಸಬೇಕಿದೆ ಎಂದು ತಿಳಿಸಿದ್ದಾರೆ. 
ಅನಂತ್ ನಾಗ್ ಜಿಲ್ಲೆಯಲ್ಲಿ 2016ರ ಜುಲೈ 8ರಂದು ನಡೆಸಲಾಗಿದ್ದ ಎನ್ ಕೌಂಟರ್ ನಲ್ಲಿ ಉಗ್ರ ಬುರ್ಹಾನ್ ವಾನಿಯನ್ನು ಹೊಡೆದುರುಳಿಸಲಾಗಿತ್ತು. 
ಬುರ್ಹಾನ್ ವಾನಿಯ ಸಾವಿನ ಮೊದಲ ವರ್ಷಾಚರಣೆಯ ದಿನವಾದ ನಿನ್ನೆ ಕಾಶ್ಮೀರದಲ್ಲಿ ಹಲವಡೆ ರ್ಯಾಲಿಯನ್ನು ನಡೆಸಲಾಗಿತ್ತು. ಇದಲ್ಲದೆ, ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅವರೂ ಕೂಡ ವಾನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದರು. ಅಲ್ಲದೆ, ಬುರ್ಹಾನ್ ವಾನಿಯನ್ನು ಹೊಗಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com