ಮುಂಬೈ: ಸ್ನೇಹಿತನ ಜತೆಯಲ್ಲಿ ಪಲ್ಲಂಗ; ಗಂಡ ಕಂಡಾಕ್ಷಣ ಪತ್ನಿಯಿಂದ ರೇಪ್ ಆರೋಪ

ಸ್ನೇಹಿತನ ಜತೆ ಸರಸವಾಡುತ್ತಿದ್ದ ಕ್ಷಣದಲ್ಲಿ ಮನೆಗೆ ಬಂದ ಗಂಡನನ್ನು ಕಂಡಾಕ್ಷಣ ಪತ್ನಿ ಅತ್ಯಾಚಾರ ಆರೋಪ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ...
ಅತ್ಯಾಚಾರ
ಅತ್ಯಾಚಾರ
Updated on: 
ಮುಂಬೈ: ಮುಂಬೈ: ಸ್ನೇಹಿತನ ಜತೆ ಸರಸವಾಡುತ್ತಿದ್ದ ಕ್ಷಣದಲ್ಲಿ ಮನೆಗೆ ಬಂದ ಗಂಡನನ್ನು ಕಂಡಾಕ್ಷಣ ಪತ್ನಿ ಅತ್ಯಾಚಾರ ಆರೋಪ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. 
30 ವರ್ಷದ ಗೃಹಿಣಿ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರು ಸರಸವಾಡುತ್ತಿದ್ದ ಸಂದರ್ಭದಲ್ಲಿ ಗಂಡ ಮನೆಗೆ ಬಂದಿದ್ದಾನೆ. ಇದರಿಂದ ಗಾಬರಿಗೊಂಡ ಆಕೆ ಸ್ನೇಹಿತನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾಳೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 
ಈ ಪ್ರಕರಣ ಸಂಬಂಧ ಪೊಲೀಸರು ನೆರೆಮನೆಯವರ ಬಳಿ ಹೇಳಿಕೆಯನ್ನು ತೆಗೆದುಕೊಂಡಿದ್ದು ಆಕೆಗೂ ಆತನಿಗೂ ಪರಿಚಯವಿತ್ತು, ಆತ ಪದೇ ಪದೇ ಮನೆಗೆ ಬಂದು ಹೋಗುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಸ್ನಾಕ್ಸ್ ವ್ಯಾಪಾರಿಯಾಗಿ ತನ್ನ ಮಡದಿ, ಇಬ್ಬರು ಮಕ್ಕಳು, ತಾಯಿ, ತಮ್ಮ ಮತ್ತು ಚಿಕ್ಕಪ್ಪನ ಜತೆ ಮುಂಬೈನ ಡ್ರಾಫ್ಟ್ರಿ ರಸ್ತೆಯಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕೆಲಸ ನಿಮಿತ್ತ ಗಂಡ ಮನೆಯಿಂದ ಹೊರಗೆ ಹೋಗಿದ್ದ. ಸ್ವಲ್ಪ ಸಮಯದಲ್ಲಿ ಆತ ಕೆಲ ವಸ್ತುವನ್ನು ಮನೆಯಲ್ಲಿ ಮರೆತು ಬಂದಿರುವುದು ನೆನಪು ಮಾಡಿಕೊಂಡು ತೆಗೆದುಕೊಂಡು ಹೋಗಲು ಮನೆಗೆ ಬಂದಿದ್ದಾನೆ. ಆಗ ತನ್ನ ಬೆಡ್ ರೂಂನಲ್ಲಿ ಅಪರಿಚಿತನನ್ನು ಕಂಡಿದ್ದಾನೆ. ಈ ವೇಳೆ ಪತ್ನಿ ಜೋರಾಗಿ ಕೂಗಿಕೊಂಡಿದ್ದು ಆತನನ್ನು ಹಿಡಿದು ಪತಿ ಥಳಿಸಿದ್ದಾನೆ. ಆತನಿಂದ ಬಿಡಿಸಿಕೊಂಡ ಕಳಚಿದ್ದ ಬಟ್ಟೆಗಳನ್ನು ತೆಗೆದುಕೊಂಡು ಪತ್ನಿಯ ಸ್ನೇಹಿತ ಅಲ್ಲಿಂದ ಪರಾರಿಯಾಗಿದ್ದ. 
ಈ ಘಟನೆ ಕುರಿತಂತೆ ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನಲ್ಲಿ ನನ್ನ ತಾಯಿ ಮತ್ತು ಅಂಕಲ್ ಮಹಡಿ ಮೇಲೆ ಮಲಗಿದ್ದರು. ನನ್ನ ತಮ್ಮ ಮತ್ತು ಆತನ ಪತ್ನಿ ಊರಿಗೆ ಹೋಗಿದ್ದರು. ಗಂಡ ಮನೆಯಲಿಲ್ಲದಾಗ ವ್ಯಕ್ತಿಯ ನನ್ನ ಮೇಲೆ ಅತ್ಯಾಚಾರ ಯತ್ನಿಸಿದ್ದ ಎಂದು ಆರೋಪಿಸಿದ್ದು ಪೊಲೀಸರು ಆತನ ವಿರುದ್ಧ 376ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com