ಕಾಶ್ಮೀರಿ ಯುವತಿ ಮೇಲಿನ ಪ್ರೀತಿಗಾಗಿ ಉಗ್ರನಾದ ಸಂದೀಪ್ ಶರ್ಮಾ!
ಎಂಥಹದ್ದೇ ಸಂದರ್ಭ, ಪರಿಸ್ಥಿತಿ ಬಂದರೂ ಸರಿಯಾ ಕಾಶ್ಮೀರ ಯುವತಿಯನ್ನು ವಿವಾಹವಾಗಬೇಕೆಂಬ ಹಟಮಾರಿತನವೇ ತಾನು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಲು ಕಾರಣ ಎಂದು ಬಂಧನಕ್ಕೊಳಗಾಗಿರುವ ಉತ್ತರಪ್ರದೇಶ ಮೂಲದ ಉಗ್ರ ಸಂದೀಪ್ ಶರ್ಮಾ...
ಶ್ರೀನಗರ: ಎಂಥಹದ್ದೇ ಸಂದರ್ಭ, ಪರಿಸ್ಥಿತಿ ಬಂದರೂ ಸರಿಯಾ ಕಾಶ್ಮೀರ ಯುವತಿಯನ್ನು ವಿವಾಹವಾಗಬೇಕೆಂಬ ಹಟಮಾರಿತನವೇ ತಾನು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಲು ಕಾರಣ ಎಂದು ಬಂಧನಕ್ಕೊಳಗಾಗಿರುವ ಉತ್ತರಪ್ರದೇಶ ಮೂಲದ ಉಗ್ರ ಸಂದೀಪ್ ಶರ್ಮಾ ಹೇಳಿಕೊಂಡಿದ್ದಾರೆ.
ಜು.1 ರಂದು ಸೇನೆ ನಡೆಸಿದ್ದ ಎನ್ ಕೌಂಟರ್ ನಲ್ಲಿ ಎಲ್ಇಟಿ ಕಮಾಂಡರ್ ಬಷೀರ್ ಲಷ್ಕರಿಯನ್ನು ಹತ್ಯೆ ಮಾಡಿಲಾಗಿತ್ತು. ಉತ್ತರಪ್ರದೇಶದ ನಿವಾಸಿಯಾಗಿರುವ ಸಂದೀಪ್ ಶರ್ಮಾ ಎಂಬಾತ ಬಷೀರ್ ಗೆ ನಿಕವರ್ತಿಯಾಗಿದ್ದ. ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಸಂದೀಪ್ ಭಾಗಿಯಾದಿದ್ದ. ಎನ್ ಕೌಂಟರ್ ವೇಳೆ ಬಷೀರ್ ಅಡಗಿದ್ದ ಮನೆಯಲ್ಲಿಯೇ ಸಂದೀಪ್ ನನ್ನು ಬಂಧನಕ್ಕೊಳಪಡಿಸಲಾಗಿತ್ತು.
ಇದೀಗ ಸಂದೀಪ್ ಶರ್ಮಾನನ್ನು ವಿಚಾರಣೆಗೊಳಪಡಿಸಿರುವ ಉತ್ತರಪ್ರದೇಶ ಉಗ್ರ ನಿಗ್ರಹ ಅಧಿಕಾರಿಗಳು ಹಲವು ಸ್ಫೋಟಕ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಸಂದೀಪ್ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಅಲ್ಲದೆ, ಕಾಶ್ಮೀರಿ ಹುಡುಗಿಯೊಂದಿಗೆ ಗಾಢವಾದ ಪ್ರೇಮದ ಬಲೆಯಲ್ಲಿ ಬಿದ್ದಿದ್ದರಿಂದಲೇ ಆಕೆಯ ಷರತ್ತಿನ ಮೇರೆಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಎಂದು ಬೆಳಕಿಗೆ ಬಂದಿದೆ.
6 ವರ್ಷಗಳ ಹಿಂದೆ ತಂದೆಯ ಮರಣದ ಬಳಿಕ ಮುಜಾಫರ್ ನಗರಿಂದ ಪಂಜಾಬ್ ಗೆ ಕೆಲಸ ಹುಡುಕಿಕೊಂಡು ಬಂದಿದ್ದ ಶರ್ಮಾಗೆ ಅಲ್ಲಿಯೇ ಕೆಲ ಕಾಶ್ಮೀರಿಗಳ ಪರಿಚಯ ಮಾಡಿಕೊಂಡಿದ್ದ. ಬೇಸಿಗೆ ಸಂದರ್ಭದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದ ಶರ್ಮಾ ಕೆಲಸ ಮಾಡಿಕೊಂಡು ಕಾಶ್ಮೀರದಲ್ಲೇ ಇರುತ್ತಿದ್ದ. ಈ ವೇಳೆ ಸಣ್ಣಪುಟ್ಟ ಪ್ರಕರಣಗಳಲ್ಲೂ ಭಾಗಿಯಾದಿದ್ದ. ಇದಾದ ಬಳಿಕ ಕಾಶ್ಮೀರದಲ್ಲಿ ಎಟಿಎಂ ದರೋಡೆ ಮಾಡಲು ಆರಂಭಿಸಿದ್ದ.
ಕೆಲಸದ ಜೊತೆಗೆ ಹಲವಾರು ಕಾಶ್ಮೀರಿ ಯುವತಿಯರೊಂದಿಗೆ ಕಾಲಕಳೆಯುತ್ತಿದ್ದ ಶರ್ಮಾಗೆ ಓರ್ವ ಕಾಶ್ಮೀರಿ ಯುವತಿಯ ಪ್ರೇಮದ ಬಲೆಗೆ ಬಿದ್ದಿದ್ದಾನೆ. ಇದರಂತೆ ಆಕೆಯ ಕುಟುಂಬದವರ ಒತ್ತಾಯಕ್ಕೆ ಮಣಿದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದಾದ ಬಳಿಕ ಶರ್ಮಾ ಹೆಸರನ್ನು ಆದಿಲ್ ಆಗಿ ಮರುನಾಮಕರಣ ಮಾಡಲಾಗಿದೆ.
ಕುಲ್ಗಾಂನಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡಿದ್ದ ಶರ್ಮಾ ತನ್ನ ಮೂಲ ಹೆಸರಿನಲ್ಲೇ ಚಾಲನಾ ಪರವಾನಗಿಯನ್ನು ಹೊಂದಿದ್ದ. ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಶಸ್ಸ್ರಾಸ್ತ್ರ ಸಾಗಾಟದ ವಾಹನದಲ್ಲಿ ಚಾಲಕನಾಗಿ ಶರ್ಮಾ ಕಾರ್ಯ ನಿರ್ವಹಿಸುತ್ತಿದ್ದ ಎಂದು ವಿಚಾರಣಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.