ಹೈದರಾಬಾದ್: ಸಿಎಂ ತೆರಳುತ್ತಿದ್ದ ವೇಳೆ ರಸ್ತೆ ದಾಟಿದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್!

ವಿಐಪಿ ಸಂಸ್ಕೃತಿಗೆ ಎಳ್ಳು ನೀರು ಬಿಡುವ ಸಲುವಾಗಿ ಗಣ್ಯರ ಕಾರುಗಳ ಮೇಲಿನ ಕೆಂಪು ದೀಪಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದರೂ, ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿನ್ನೂ ವಿಐಪಿ ಸಂಸ್ಕೃತಿ ಇನ್ನೂ ದೇಶದಲ್ಲಿ ಜೀವಂತವಾಗಿದೆ...
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡು
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡು
ಹೈದರಾಬಾದ್: ವಿಐಪಿ ಸಂಸ್ಕೃತಿಗೆ ಎಳ್ಳು ನೀರು ಬಿಡುವ ಸಲುವಾಗಿ ಗಣ್ಯರ ಕಾರುಗಳ ಮೇಲಿನ ಕೆಂಪು ದೀಪಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದರೂ, ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿನ್ನೂ ವಿಐಪಿ ಸಂಸ್ಕೃತಿ ಇನ್ನೂ ದೇಶದಲ್ಲಿ ಜೀವಂತವಾಗಿದೆ. ಇದಕ್ಕೆ ಉದಾಹರಣೆಯೆಂಬಂತೆ ಹೈದರಾಬಾದ್ ನಲ್ಲಿ ಘಟನೆಯೊಂದು ನಡೆದಿದೆ. 
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡು ಅವರ ಬೆಂಗಾವಲು ವಾಹನಗಳು ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ರಸ್ತೆ ದಾಟಿದ ಎಂಬ ಕಾರಣಕ್ಕೆ ವ್ಯಕ್ತಿಯ ಮೇಲೆ ಪೊಲೀಸ್ ದರ್ಪ ತೋರಿದ್ದು, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. 
ಚಂದ್ರಬಾಬು ನಾಯ್ಡು ಅವರು ಹೈದರಾಬಾದ್ ಗೆ ತೆರಳಿದ್ದ ವೇಳೆ ಸಿಎಂ ಮತ್ತು ಅವರ ಬೆಂಗಾವಲು ವಾಹನಗಳು ರಸ್ತೆಯ ಮಾರ್ಗವಾಗಿ ಹೋಗುತ್ತಿದ್ದವು. ಈ ವೇಳೆ ವ್ಯಕ್ತಿಯೋರ್ವ ರಸ್ತೆ ದಾಟಿದ್ದಾನೆ. ಇದನ್ನು ಗಮನಿಸಿದ ಪೊಲೀಸ್ ಪೇದೆಯೋರ್ವ ವ್ಯಕ್ತಿಯ ಪಕಾಳಕ್ಕೆ ಹೊಡೆದಿದ್ದಾನೆ. 
ವ್ಯಕ್ತಿಯ ಮೇಲೆ ಪೇದೆ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೇದೆ ವಿರುದ್ಧ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗತೊಡಗಿವೆ. 
ವಿಡಿಯೋದಲ್ಲಿರುವ ಪ್ರಕಾರ, ಮುಖ್ಯಮಂತ್ರಿಗಳು ಹಾಗೂ ಅವರ ಬೆಂಗಾವಲು ವಾಹನಗಳು ತೆರಳುತ್ತಿದ್ದ ವೇಳೆ ರಸ್ತೆ ದಾಟುವ ಸಲುವಾಗಿ ಬದಿಯಲ್ಲಿ ನಿಂತಿದ್ದ. ಸಿಎಂ ವಾಹನ ತೆರಳಿದ ಬಳಿಕ ಬೆಂಗಾವಲು ವಾಹನಗಳು ಬರುತ್ತವೆಂದು ತಿಳಿಯದ ವ್ಯಕ್ತಿ ಗೊಂದಲದಲ್ಲಿಯೇ ರಸ್ತೆ ದಾಟಿದ್ದಾನೆ. ಬೆಂಗಾವಲು ವಾಹನಗಳು ತೆರಳಿದ ಬಳಿಕ ಸ್ಥಳದಲ್ಲಿದ್ದ ಪೊಲೀಸ್ ಪೇದೆಯೊಬ್ಬ ಮುಖ್ಯರಸ್ತೆಯಲ್ಲಿಯೇ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com