ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಾ ವಿವಾದದ ಬಗ್ಗೆ ಮಾತನಾಡಿದ ವೇಳೆ ಶಶಿ ತರೂರ್ ದೇವೇಗೌಡರ ಭಾಷಣವನ್ನು ಉಲ್ಲೇಖಿಸಿದ್ದು, " 49 ನೇ ಸ್ವಾತಂತ್ರ್ಯ ದಿನಾಚರಣೆಯಂದು ಅಂದಿನ ಪ್ರಧಾನಿ ದೇವೇಗೌಡರು ಕೆಂಪುಕೋಟೆಯಲ್ಲಿ ನಿಂತು ಹಿಂದಿಯಲ್ಲಿ ಭಾಷಣ ಮಾಡಿದ್ದರು. ಅವರಿಗೂ ಮುನ್ನ ಬಂದ 8 ಪ್ರಧಾನಿಗಳು 48 ಬಾರಿ ಇದೇ ರೀತಿ ಭಾಷಣ ಮಾಡಿದ್ದರಾದರೂ ದೇವೇಗೌಡರು ತಮಗೆ ಹೆಚ್ಚು ಗೊತ್ತಿಲ್ಲದ ಭಾಷೆಯಲ್ಲಿ ಭಾಷಣ ಮಾಡಿದ್ದರು. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿಗಳು ಹಿಂದಿ ಭಾಷೆಯಲ್ಲಿ ಭಾಷಣ ಮಾಡುವುದು ಸಂಪ್ರದಾಯ, ಹಾಗಾಗಿ ಕನ್ನಡದಲ್ಲಿ ಬರೆದಿದ್ದ ಹಿಂದಿ ಭಾಷಣವನ್ನು ದೇವೇಗೌಡರು ಓದಿದ್ದರು. ಅವರು ಏನು ಹೇಳುತ್ತಿದ್ದಾರೆಂಬುದು ಬಹುಪಾಲು ನನಗೆ ಅರ್ಥವಾಗಲಿಲ್ಲ ಇಂತಹ ಸನ್ನಿವೇಶ ಮತ್ತೆಲ್ಲೂ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.