ಚೀನಾ ಗಡಿಯಲ್ಲಿ ಸುರಂಗ ನಿರ್ಮಿಸಲು ಮುಂದಾದ ಭಾರತ

ಭಾರತ ಚೀನಾ ಗಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ಗಡಿ ರಸ್ತೆ ನಿರ್ಮಾಣ ಸಂಸ್ಥೆ(ಬಿಆರ್‌ಒ) ನಿರ್ಧರಿಸಿದೆ...
ಚೀನಾ ಗಡಿ
ಚೀನಾ ಗಡಿ
ಇಟಾನಗರ: ಭಾರತ ಚೀನಾ ಗಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ಗಡಿ ರಸ್ತೆ ನಿರ್ಮಾಣ ಸಂಸ್ಥೆ(ಬಿಆರ್‌ಒ) ನಿರ್ಧರಿಸಿದೆ. 
ಅರುಣಾಚಲ ಪ್ರದೇಶದಲ್ಲಿ 4170 ಮೀಟರ್ ಎತ್ತರದಲ್ಲಿರುವ ಸೆಲಾ ಪಾಸ್ ನಲ್ಲಿ ಎರಡು ಸುರಂಗ ಮಾರ್ಗ ನಿರ್ಮಾಣವಾಗಲಿದ್ದು ಇದು ಚೀನಾದ ಗಡಿಯೊಂದಿಗಿನ ದೂರವನ್ನು 10 ಕಿ.ಮೀ ಕಡಿಮೆಗೊಳಿಸಲಿದೆ. 
ತೇಜ್ಪುರ್ ಹಾಗೂ ತವಾಂಗ್ ನಲ್ಲಿರುವ ಸೇನೆಯ 4 ಕಾರ್ಫ್ಸ್ ಪ್ರಧಾನ ಕಚೇರಿಯಿಂದ ಚೀನಾದ ಬಾರ್ಡರ್ ಗೆ ಒಂದು ಗಂಟೆಯ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುತ್ತದೆ. ಸುರಂಗಗಳಿಂದ ಬೊಮ್ಡಿಲಾ ಮತ್ತು ತವಾಂಗ್ ನಡುವಿನ 171 ಕಿ.ಮೀ ದೂರದ ಎನ್ ಎಚ್ 13 ಎಲ್ಲಾ ಋತುಗಳಲ್ಲೂ ಸಂಚಾರ ಯೋಗ್ಯವಾಗಲಿದೆ.
ರಾಜ್ಯದ ಗುಡ್ಡಗಾಡು ಪ್ರದೇಶವನ್ನು ಸುಲಭವಾಗಿ ದಾಟಿ ವೇಗವಾಗಿ ಟಿಬೆಟ್ ಗಡಿಯನ್ನು ತಲುಪಲು ಈ ಸುರಂಗಗಳು ನೆರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com