ಕಾನ್ಪುರ ರೈಲ್ವೆ ಜಂಕ್ಷನ್ 200 ಕೋಟಿಗೆ, ಅಲಹಾಬಾದ್ ರೈಲ್ವೆ ಜಂಕ್ಷನ್ 150 ಕೋಟಿಗೆ ಹರಾಜು!

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರಮುಖ ರೈಲು ನಿಲ್ದಾಣಗಳನ್ನು ಹರಾಜು ಹಾಕಲು ಮುಂದಾಗಿದೆ.
ಖಾನ್ ಪುರ ರೈಲ್ವೆ ಜಂಕ್ಷನ್
ಖಾನ್ ಪುರ ರೈಲ್ವೆ ಜಂಕ್ಷನ್
Updated on: 
ನವದೆಹಲಿ: ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರಮುಖ ರೈಲು ನಿಲ್ದಾಣಗಳನ್ನು ಹರಾಜು ಹಾಕಲು ಮುಂದಾಗಿದೆ. 
ಪುನರ್ ನವೀಕರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಪಿಪಿ ಯೋಜನೆಯಡಿ ಕಾನ್ಪುರ ರೈಲ್ವೆ ಜಂಕ್ಷನ್ ಹಾಗೂ ಅಲಹಾಬಾದ್ ರೈಲ್ವೆ ಜಂಕ್ಷನ್ ನ್ನು ಹರಾಜು ಹಾಕಲು ಮುಂದಾಗಿದೆ ಎಂದು ಪತ್ರಿಕಾ.ಕಾಂ ವರದಿ ಪ್ರಕಟಿಸಿದೆ. ಪತ್ರಿಕೆಯ ವರದಿ ಪ್ರಕಾರ ಜೂ.28 ರಂದು ಉತ್ತರ ಪ್ರದೇಶದ ಎರಡು ರೈಲ್ವೆ ಜಂಕ್ಷನ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕಾನ್ಪುರ ರೈಲ್ವೆ ಜಂಕ್ಷನ್ ಗೆ 200 ಕೋಟಿ ಅಲಹಾಬಾದ್ ರೈಲ್ವೆ ಜಂಕ್ಷನ್ ಗೆ 150 ಕೋಟಿ ದರ ನಿಗದಿಪಡಿಸಲಾಗಿದೆ. 
ಜೂ.30 ರಂದು ಹರಾಜು ಪ್ರಕ್ರಿಯೆಯ ಫಲಿತಾಂಶ ಹೊರಬೀಳಲಿದೆ. ಕೇಂದ್ರ ಸರ್ಕಾರ 25 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ನವೀಕರಣಗೊಳಿಸಲು ಉದ್ದೇಶಿಸಿದ್ದು, ಬೆಂಗಳೂರು, ಮುಂಬೈ ನ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣ, ಪುಣೆ, ಥಾಣೆ, ವಿಶಾಖಪಟ್ಟಣ, ಹೌರಾ, ಅಲ್ಲಾಹಾಬಾದ್, ಕಾಮಾಕ್ಯ, ಫರೀದಾಬಾದ್, ಜಮ್ಮು ತಾವಿ,  ಬೆಂಗಳೂರು ಕಂಟೋನ್ಮೆಂಟ್, ಭೋಪಾಲ್, ಮುಂಬೈ ಕೇಂದ್ರ, ಇಂದೋರ್ ನ ನಿಲ್ದಾಣಗಳು ಪಟ್ಟಿಯಲ್ಲಿವೆ ಎಂದು ಹೇಳಲಾಗಿದೆ. 
ಕನಿಷ್ಠ 30,000 ಕೋಟಿ ರೂ ವೆಚ್ಚದ ಹೂಡಿಕೆಯಲ್ಲಿ ರೈಲು ನಿಲ್ದಾಣಗಳ ನವೀಕರಣಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ರೈಲ್ವೆ ಇಲಾಖೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಪುನರ್ ನವೀಕರಣದ ಪ್ರಕ್ರಿಯೆಯ ಭಾಗವಾಗಿ ಮೂಲಸೌಕರ್ಯಗಳನ್ನು ನವೀಕರಿಸುವುದಕ್ಕೆ ಬಿಡ್ಡರ್ ಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com