ಅಮೆರಿಕಾದ ನೀತಿಯಿಂದಾಗಿ ಬಂದರು ಅಭಿವೃದ್ಧಿಗೆ ಅಗತ್ಯವಿರುವ ಉಪಕರಣಗಳನ್ನು ಪೂರೈಕೆ ಮಾಡಲು ಉತ್ಪಾದಕರು ಹಿಂದೇಟು ಹಾಕುತ್ತಿದ್ದು, ಬಂದರು ಅಭಿವೃದ್ಧಿ ಯೋಜನೆಯ ಮೇಲೆ ಕರಿ ಛಾಯೆ ಆವರಿಸುವ ಪರಿಸ್ಥಿತಿ ಎದುರಾಗಿದೆ. ಪಾಕಿಸ್ತಾನ್ನವನ್ನು ಹೊರಗಿಟ್ಟು ಕೇಂದ್ರ ಏಷ್ಯಾದೊಂದಿಗೆ ಸಂಪರ್ಕ ಸಾಧಿಸುವ ಬಂದರು ಅಭಿವೃದ್ಧಿ ಯೋಜನೆಯನ್ನು ಅಫ್ಘಾನಿಸ್ಥಾನ, ಇರಾನ್, ಭಾರತ ಕೈಗೊಂಡಿದ್ದವು. ಆದರೆ ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಇರಾನ್ ಹಾಗೂ ಅಮೆರಿಕಾ ದ್ವಿಪಕ್ಷೀಯ ಸಂಬಂಧದಲ್ಲಿ ವ್ಯತ್ಯಾಸ ಉಂಟಾಗಿದ್ದು, ಅಮೆರಿಕಾ ಮತ್ತೆ ಇರಾನ್ ಮೇಲೆ ನಿರ್ಬಂಧ ವಿಧಿಸುವ ಭೀತಿ ಎದುರಾಗಿದೆ.