ಉಲ್ಫಾ ಸಂಘಟನೆಯ ಅರಬಿಂದಾ ರಾಜ್ಖೋವಾ ಬಣದ ಬೇಡಿಕೆಗಳೊಂದಿಗೆ ಶಾಂತಿ ಮಾತುಕತೆಯ ಪ್ರಕ್ರಿಯೆ ಮುಂದುವರೆದಿದ್ದು, ಅವರ ಬಹುತೇಕ ಬೇಡಿಕೆಗಳು ಪರಿಗಣನೆಗೆ ಅರ್ಹವಾಗಿವೆ ಎಂದು ಮಾಧ್ಯಮಗಳಿಗೆ ಕಿರಣ್ ರಿಜಿಜು ತಿಳಿಸಿದ್ದಾರೆ. ಈ ಕುರಿತು ವಿವರಣೆ ನೀಡಲು ನಿರಾಕರಿಸಿರುವ ಕಿರಣ್ ರಿಜಿಜು ಶೀಘ್ರವೇ ಅಂತಿಮ ಪರಿಹಾರ ಕಂಡುಕೊಳ್ಳಲಾಗುವುದು ಎಂಬುದನ್ನು ಹೇಳಲಷ್ಟೇ ಸಾಧ್ಯ ಎಂದಿದ್ದಾರೆ.